Advertisement
1522ರಲ್ಲಿ ಈ ದ್ವೈವಾರ್ಷಿಕ ಪೂಜಾ ಪದ್ಧತಿ ಆರಂಭಗೊಂಡಿತು. ಈಗ 2022ರ ಪರ್ಯಾಯ ಪೂಜಾ ಪದ್ಧತಿಯ ಸಂಕ್ರಮಣಕಾಲ. ಪದ್ಧತಿ ಆರಂಭಗೊಂಡು 500 ವರ್ಷಗಳು ಕಳೆದು 501ನೇ ವರ್ಷ ಆರಂಭವಾಗುತ್ತಿದೆ. ಈಗಿನ ಅದಮಾರು ಮಠ ಪರ್ಯಾಯ ಅನುಕ್ರಮಣಿಕೆಯಲ್ಲಿ 250ನೆಯದು. ಮುಂದಿನ ಪರ್ಯಾಯ 251ನೆಯದು. 2020ರ ಜ. 18ರಂದು ಅದಮಾರು ಮಠದ ಪರ್ಯಾಯ ಆರಂಭಗೊಂಡಿತು. 2020ರ ಮಾರ್ಚ್ 22ರಿಂದ ಭಾರತದಲ್ಲಿ ಕೋವಿಡ್ ಕಾಟ ಆರಂಭಗೊಂಡಿತು. ಆದರೆ ಇದು ಜಾಗತಿಕವಾಗಿ ಕಂಡದ್ದು 2019ರ ಡಿ. 31ರಂದು. ಇದಕ್ಕೆ ಎರಡೇ ದಿನ ಮೊದಲು ಹಿರಿಯ ಯತಿ, ಹಲವು ದಾಖಲೆಗಳನ್ನು ದಾಖಲಿಸಿದ ಯತಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಿರ್ಯಾಣಗೊಂಡರು. ಈ 499 ಮತ್ತು 500ನೇ ವರ್ಷಪೂರ್ತಿ ಶ್ರೀಕೃಷ್ಣ ಮಠ ಮಾತ್ರವಲ್ಲದೆ ಇಡೀ ಜಗತ್ತು ಕೋವಿಡ್ ವೈರಸ್ ಸೋಂಕಿನಿಂದ ತತ್ತರಿಸಿ ಹೋಯಿತು. 501ನೇ ವರ್ಷಕ್ಕೆ ಮುಂದಿನ ಜ. 18ರಂದು ಕಾಲಿಡುವಾಗ ಲಭ್ಯ ಮಾಹಿತಿ ಪ್ರಕಾರ ಈಗ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ.
Related Articles
ಎಷ್ಟು ಜನರು ಬರುತ್ತಾರೆ. ಹೇಗೆ ನಿಭಾಯಿಸುವುದು ಎಂಬ ಕಳಕಳಿ ಇತ್ತು. 500 ವರ್ಷಗಳ ಹಿಂದೆ ಹೇಗಿದ್ದಿರಬಹುದು ಎಂಬ ಆ ಕಾಲಘಟ್ಟವನ್ನು ಈ ಅವಧಿಯಲ್ಲಿ ಅನುಭವಿಸುವಂತಾಯಿತು. ಎಲ್ಲವೂ ನಿಃಶಬ್ದವಾಗಿತ್ತು. ಲೋಕದ ಜನರಿಗೆ ತೊಂದರೆಯಾದದ್ದು ಹೌದು. ಪೀಠವೇರುವ ಮುನ್ನ ಮಾಡಲಾಗದ ಸುಣ್ಣ ಬಣ್ಣವೇ ಮೊದಲಾದ ಕೆಲಸಗಳನ್ನು ಬಳಿಕ ಪೂರೈಸಲು ಸಾಧ್ಯವಾಯಿತು. ಇದರಿಂದ ಒಂದಿಷ್ಟು ಜನರಿಗೆ ಅನುಕೂಲವೂ ಆಯಿತು. ಆರು ಯತಿಗಳು ಇಲ್ಲಿ ಚಾತುರ್ಮಾಸ್ಯವ್ರತ ಕೈಗೊಂಡದ್ದು ಇಲ್ಲವೇ ಇಲ್ಲ ಎನ್ನಬಹುದು. ಇದೂ ಸಾಧ್ಯವಾಯಿತು. ನಾವು ನಿರ್ದಿಷ್ಟವಾಗಿ ಇದೇಕೆ ಹೀಗಾಯಿತು ಎನ್ನಲಾಗದು. ಏಕೆಂದರೆ ಕೊರೊನಾ ಆಗಲೀ ಇದಕ್ಕೆ ಸಂಬಂಧಿಸಿದ ಪೂರ್ವಾಪರಗಳನ್ನಾಗಲೀ, ಹಿಂದೆ ಆದ ಸಾಂಕ್ರಾಮಿಕ ರೋಗಗಳ ವಿಷಯವನ್ನಾಗಲೀ ಅಧ್ಯಯನ ಮಾಡಿಲ್ಲ. ಲೋಕದಲ್ಲಿ ಏನು ಕಂಡುಬರುತ್ತದೋ ಅದು ನಮಗೂ ಬರುತ್ತದೆ. ಅದನ್ನು ಅನುಭವಿಸಲೇಬೇಕು.
Advertisement
ಆರ್ಥಿಕ ಸಂಕಷ್ಟಗಳನ್ನು ಹೇಗೆ ಇದಿರಿಸಿದ್ದೀರಿ? ಭಕ್ತರ ಓಡಾಟಕ್ಕೆ ತೊಂದರೆಯಾದ ಕಾರಣ ಆದಾಯದಲ್ಲಿ ಏರುಪೇರಾಯಿತು. ಈಗ ತೊಂದರೆಇಲ್ಲ, ಅಂದಂದಿನ ಆದಾಯ ಆ ದಿನದ ಖರ್ಚಿಗೆ ಹೊಂದಾಣಿಕೆ ಯಾಗುತ್ತದೆ. ಪರ್ಯಾಯ ಕಾಲದಲ್ಲಿ ನಾವು 1 ಕೋ.ರೂ. ಸಾಲಮಾಡಿದ್ದೆವು. ಇದು ಹಣವಿಲ್ಲ ಎಂಬ ಕಾರಣಕ್ಕೆ ಅಲ್ಲ. ನಮ್ಮ ಜಾಗರೂಕತೆಗೆ. ಅದಮಾರು ಮಠದ ನಿಧಿಯನ್ನು ಖರ್ಚು ಮಾಡಿದ್ದೇವೆ.ಕಾಲಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಅದಮಾರು ಶ್ರೀಗಳು ಹೊಂದಿ
ಕೊಳ್ಳಲಿಲ್ಲವೆ? ಹಾಗೆ ನಾವು ಕೂಡ ಹೊಂದಿಕೊಳ್ಳಬೇಕಾಗುತ್ತದೆ. ಆಯಾ ಕಾಲಘಟ್ಟದ ನಿಸರ್ಗ ಮತ್ತು ಸರಕಾರದ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಪರ್ಯಾಯ ಸಂಚಾರ ಕ್ಷೇತ್ರಗಳ ದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಪರ್ಯಾಯೋತ್ಸವಕ್ಕೆ ಸುಮಾರು 1 ಕೋ.ರೂ. ಬೇಕು. ಸರಳವಾಗಿ ಮಾಡಿದರೆ ಖರ್ಚು ಕಡಿಮೆಯಾಗಬಹುದು.