Advertisement
ಬೆಳಗ್ಗೆ 8ಕ್ಕೆ ತುಲಾಭಾರ ಸೇವೆ, 10ಕ್ಕೆ ಸಾಮೂಹಿಕ ಶ್ರೀ ಶನಿಪೂಜೆ, 11.30ಕ್ಕೆ ದೇವರ ಬಾಳು ಭಂಡಾರ ಬರುವುದು, 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ಕಲ್ಕುಡ ದೈವಕ್ಕೆ ಹೂವಿನ ಪೂಜೆ, 9.30ಕ್ಕೆ ಸಿರಿ ಸಿಂಗಾರದ ನೇಮ ನಡೆಯಲಿದೆ.
ದಿ| ಕೊರತಿ ಪೂಜಾರಿ ಸ್ಮರಣಾರ್ಥ ಸಪ್ತ ಸಾಧಕರಾದ ಕುಂಜಾರುಗಿರಿ ಶ್ರೀ ಪಾಜಕ ಕ್ಷೇತ್ರದ ಧಾರ್ಮಿಕ ವಿಧಿ ತಜ್ಞ ಮಾಧವ ಉಪಾಧ್ಯಾಯ, ದೈವಾರಾಧನೆ ನಡೆಸುವ ಭಾಸ್ಕರ ಪಂಬದೆರ್ ಪಡುಬಿದ್ರಿ, ವ್ಯಾಪಾರಿ ಶೀನ ನಾಯ್ಕ ದೊಡ್ಡಣಗುಡ್ಡೆ, ತುಳು ಚಿತ್ರ ನಟಿ ರಂಜಿತಾ ಶೇಟ್, ಜಿಲ್ಲಾ ಭಜನ ಮಂಡಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ಶಿವಕುಮಾರ್ ಅಂಬಲಪಾಡಿ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಶ್ರೀಹರಿ ಪಾಡಿಗಾರ್, ಸ್ಯಾಕೊಫೋನ್ ಬಾಲ ಪ್ರತಿಭೆ ಶ್ರೀನಿಧಿ ದೇವಾಡಿಗ ಬಂಟಕಲ್ಲು ಅವರನ್ನು ಸಮ್ಮಾನಿಸಲಾಗುವುದೆಂದು ಭಾಸ್ಕರ ಗುಂಡಿಬೈಲು ತಿಳಿಸಿದ್ದಾರೆ.