Advertisement

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ: ಜ 22 ರಂದು ರಾಮನಾಮ ತಾರಕಮ್

07:26 PM Jan 19, 2024 | Team Udayavani |

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿಇದೇ ಜ 22 (ಸೋಮವಾರ) ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಬೆಳಗ್ಗೆ  ರಾಮನಾಮ ತಾರಕ ಮಂತ್ರ ಹೋಮವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಗಳ ನೇತೃತ್ವದಲ್ಲಿ ನೆರವೇರಲಿದೆ.

Advertisement

ಸಂಜೆ 4 ಗಂಟೆಯಿಂದ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಹೆಸರಾಂತ ಕಲಾವಿದರ ಕೂಡುವಿಕೆಯೊಂದಿಗೆ ವಿವಿಧ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ಡಾಕ್ಟರ್ ಅರವಿಂದ ಹೆಬ್ಬಾರ್ ಅವರ ನೇತೃತ್ವದಲ್ಲಿ ನೆರವೇರಲಿದೆ.ಚಂದ್ರಕಲಾ ಶರ್ಮಾ ಕೊರಂಗ್ರಪಾಡಿ ಅವರಿಂದ ರಾಮನಾಮ ಸಂಕೀರ್ತನೆ.ಕೆಮ್ಮಣ್ಣು ಸಿಸ್ಟರ್ಸ್ ಕುಮಾರಿ ಸುಮೇದ ಹಾಗೂ ಕುಮಾರಿ ಶರಣ್ಯ ಅವರಿಂದ ರಾಮದುನ್ ಸಂಗೀತ ಕಾರ್ಯಕ್ರಮ,
ಆರರಿಂದ ಧಾರ್ಮಿಕ ಸಭೆ ನಡೆಯಲಿದ್ದು ಶ್ರೀ ಮದಚ್ಚುತ ಪ್ರೇಕ್ಷಾಚಾರ್ಯ ಮಹಾಸಂಸ್ಥಾನ ಭೀಮನ ಕಟ್ಟೆಯ ಮಠದಿಪತಿಗಳಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉಡುಪಿಯ ಶಾಸಕರಾದ ಯಶ್ ಪಾಲ್ ಎ ಸುವರ್ಣ ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಲಿದ್ದಾರೆ.

ಸಂಜೆ 6:30 ರಿಂದ ”ಅಲ್ಲಿ ನೋಡಲು ರಾಮ” ಸಂಗೀತ ರೂಪಕ ಖ್ಯಾತ ಕಲಾವಿದ ವಿನಯ್ ವಾರಣಾಸಿ ಬೆಂಗಳೂರು ಅವರಿಂದ ನೆರವೇರಲಿದ್ದು ಕುಮಾರಿ ಅರ್ಚನಾ ಹಾಗೂ ಸಮನ್ವಿ ಹಾಡುಗಾರಿಕೆಯಲ್ಲಿ ವೈಯಲಿನ್ ಲ್ಲಿ ಶ್ರುತಿ ಸಿಬಿ, ಮೈಸೂರು ಹಾಗೂ ಮೃದಂಗದಲ್ಲಿ ನಿಕ್ಷಿತ್, ತಬಲಾದಲ್ಲಿ ಮಾಧವ ಆಚಾರ್ಯ ಸಹಕರಿಸಲಿದ್ದಾರೆ.

ರಾತ್ರಿ 8:15 ರಿಂದ ಬೆಂಗಳೂರಿನ ಕಾಲ ಸ್ನೇಹಿ ಹಾಗೂ ನರ್ತನ ಯೋಗ ನೃತ್ಯ ಸಂಸ್ಥೆಯ ಯೋಗೇಶ್ ಕುಮಾರ್ ಮತ್ತು ಸ್ನೇಹನಾರಾಯಣ್ ಅವರಿಂದ ರಾಮಕಥಾ ಸುಧಾ, ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ರಾತ್ರಿ ಮಹಾ ಅನ್ನ ಸಂತರ್ಪಣೆ ನೆರವೇರಲಿದೆ.

ಹಣತೆ ಬೆಳಕಿನ ಅಡಿಯಲ್ಲಿ ನೆರವೇರಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲಾ ಭಕ್ತರುಗಳು ಪಾಲ್ಗೊಳ್ಳುವಂತೆ ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಆಮಂತ್ರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next