Advertisement
ಜ. 21ರಂದು ದೂರು ಆಯುಕ್ತರೊಂದಿಗೆ, ಜಿಲ್ಲಾಧಿಕಾರಿಗಳು, ಶಾಸಕರಿಗೂ ದೂರು ನೀಡಲಾಗಿದ್ದು ಅಡ್ಡೆಗಾರರನ್ನು ಸಮಿತಿಯೊಳಗೆ ಸೇರಿಸುವಂತೆ ಆಗ್ರಹಿಸಲಾಗಿದೆ. ಒಂದೊಮ್ಮೆ ಸೇರಿಸದಿದ್ದರೆ ದೇಗುಲದ ಉತ್ಸವ ಹೊರುವುದಕ್ಕೆ ಹಿಂದೇಟು ಹಾಕುವ ಸಂಭವ ಕಂಡುಬರುತ್ತಿದೆ.
Related Articles
Advertisement
ಈ ಬಗ್ಗೆ ದೇಗುಲದ ಕಾರ್ಯನಿರ್ವಹಣಾಧಿಕಾರಿವಿದ್ಯುಲ್ಲತಾ ಅವರನ್ನು ಸಂಪರ್ಕಿಸಿದಾಗ, ಅಡ್ಡೆಗಾರರು ದೂರು ನೀಡಿರುವುದು ನಿಜ. 2012 ರಲ್ಲಿ ಇದೆ ರೀತಿ ಸಮಸ್ಯೆ ಉಂಟಾದಾಗ ಅಂದಿನ ಜಿಲ್ಲಾಧಿಕಾರಿಗಳು ಸಂಧಾನಸಭೆ ನಡೆಸಿ ಸಮಿತಿಯಲ್ಲಿ ಕಾಯಂ ಆಗಿಅಡ್ಡೆಗಾರರ ಪೈಕಿ ಒಬ್ಬರನ್ನು ನೇಮಕ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದರು. ಆದರೆ ಏಕೋ ಏನೋ ಈ ವರ್ಷ ಸಮಿತಿಯಲ್ಲಿ ಅಡ್ಡೆಗಾರರನ್ನುಕೈಬಿಡಲಾಗಿದೆ. ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು.
ಅಡ್ಡೆಗಾರರಿಗೆ ಹಿಂದೆ ಸಿಕ್ಕಿತ್ತು ಪ್ರಾತಿನಿಧ್ಯ :
ಪ್ರಥಮ ದರ್ಜೆ ದೇಗುಲವಾದ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ ಆರಂಭದಿಂದ 9 ಸದಸ್ಯರನ್ನು ಒಳಗೊಂಡ ಧರ್ಮದರ್ಶಿ ಸಮಿತಿ ರಚನೆ ಮಾಡಲಾಗುತ್ತಿದ್ದು, ಅಲ್ಲಿಂದಲೂ ಉತ್ಸವ ಹೊರುವ 4 ಮೂಲೆಯ ಅಡ್ಡೆಗಾರರನ್ನು ಸಮಿತಿಗೆ ನೇಮಿಸಲಾಗುತ್ತಿತ್ತು. ಸಮಿತಿಯಲ್ಲಿ ಇಬ್ಬರು ಅಡ್ಡೆಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, 2012ರಲ್ಲಿ ಸಮಿತಿ ರಚನೆ ವೇಳೆ ಅಡ್ಡೆಗಾರರನ್ನು ಕಡೆಗಣಿಸಿದ್ದರಿಂದ ಉತ್ಸವ ಹೊರುವುದಿಲ್ಲವೆಂದು ಅಡ್ಡೆಗಾರರು ಪಟ್ಟು ಹಿಡಿದಿದ್ದರು. ಆ ವೇಳೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಸಮಿತಿಯಲ್ಲಿ ಅಡ್ಡೆಗಾರರಿಗೆ ಪ್ರಾತಿನಿಧ್ಯ ಕೊಡುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಅದರಂತೆ ಅಂದಿನಿಂದಲೂ ಸಮಿತಿಯಲ್ಲಿ ಅಡ್ಡೆಗಾರರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು.