Advertisement

ವಿಜೃಂಭಿಸಿದ “ಶ್ರೀ  ಬಪ್ಪನಾಡು ಕ್ಷೇತ್ರ ಮಹಾತ್ಮೆ’ಯಕ್ಷಗಾನ 

12:08 PM Sep 06, 2017 | |

ಕರಾವಳಿಯ ಶ್ರೀಮಂತ ಕಲೆ, ದೇಶ ವಿದೇಶಗಳಲ್ಲಿ  ಹೆಸರನ್ನು ಗಳಿಸಿದ  ಯಕ್ಷಗಾನವನ್ನು ಪುಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪುಣೆಯ ಯಕ್ಷ ಕಲಾ ಪ್ರೇಮಿಗಳಿಗೆ ವಿವಿಧ ಯಕ್ಷಗಾನ ಪ್ರಸಂಗಗಳ ಪ್ರದರ್ಶನ, ತಾಳಮದ್ದಳೆಗಳನ್ನು ಆಯೋಜಿಸುವ ಮೂಲಕ  ಯಕ್ಷಗಾನದ ರಸದೌತಣವನ್ನೂ ನಿರಂತರ ನೀಡುತ್ತಾ ಬಂದಿರುವ ಪುಣೆಯ ಶ್ರೀ ಮಹಾಗಣಪತಿ  ಯಕ್ಷಗಾನ ಮಂಡಳಿಯ ಕಾರ್ಯ ಶ್ಲಾಘನೀಯ.

Advertisement

ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಅವರು ಯಕ್ಷಗಾನದ ಮೇಲಿನ ಪ್ರೀತಿಯಿಂದ ಯಕ್ಷಗಾನದ  ಅಭಿರುಚಿ ಇರುವ ಕಲಾವಿದರನ್ನು ಒಂದೇ  ಸೂರಿನಡಿ ಸೇರಿಸಿ ಪುಣೆಯಲ್ಲಿ ಒಂದು ಮಂಡಳಿಯನ್ನು ಸ್ಥಾಪಿಸಿ ಅದರ ಮುಖಾಂತರ ಹಲವಾರು ಯಕ್ಷಗಾನ ಪ್ರಯೋಗಗಳನ್ನು ಪುಣೆ ಮತ್ತು ಪುಣೆಯಿಂದ ಹೊರಗೆ ನೀಡಿದ ಕೀರ್ತಿ ಈ ಮಂಡಳಿಗಿದೆ. ಈ ಮೂಲಕ ಪುಣೆಯಲ್ಲಿ ಹಲವಾರು ಯಕ್ಷಗಾನ ಕಲಾವಿದರ ಹುಟ್ಟಿಗೆ ಮಂಡಳಿಯು  ಕಾರಣವಾಗಿದೆ ಎನ್ನಬಹುದು.

ನಮ್ಮ ಕರಾವಳಿ ಪ್ರದೇಶದಿಂದ ಬರುವ ಇನ್ನಿತರ ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ಪ್ರಾಯೋಜಕತ್ವ, ವ್ಯವಸ್ಥಾಪಕತ್ವವನ್ನು ನೀಡುವ ಮೂಲಕ ಸಹಕಾರವನ್ನು ನೀಡುವ ಕೆಲಸ ಪುಣೆಯ ಮಂಡಳಿಯ ಮುಖಾಂತರ  ಆಗುತ್ತಿದೆ, ಇದಕ್ಕೆ ಇನ್ನೊಂದು ಸೇರ್ಪಡೆಯಂತೆ ಮಳೆಗಾಲದ ಯಕ್ಷಗಾನ ಪ್ರದರ್ಶನ ನೀಡುವ ನಿಡ್ಲೆ ಗೋವಿಂದ ಭಟ್‌ ಅವರ ಸಾರಥ್ಯದ ಶ್ರೀ  ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮೇಳದ ಊರಿನ ಹೆಸರಾಂತ  ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಆಯ್ದ ಕಲಾವಿದರು   ಮತ್ತು ಪುಣೆ ಮಂಡಳಿಯ ಕಲಾವಿದರ ಕೂಡುವಿಕೆಯಿಂದ ನಡೆದ “ಶ್ರೀ  ಬಪ್ಪನಾಡು ಕ್ಷೇತ್ರ ಮಹಾತೆ¾’ ಯಕ್ಷಗಾನವು ಸೇರಿದ ಅಪಾರ ಸಂಖ್ಯೆಯ ಕಲಾ ರಸಿಕರನ್ನು ರಂಜಿಸಿತು.

ಪುಣೆ ಶ್ರೀ  ಮಹಾಗಣಪತಿ ಯಕ್ಷಗಾನ ಮಂಡಳಿಯ  ವ್ಯವಸ್ಥಾಪಕತ್ವದಲ್ಲಿ, ಪುಣೆಯ ಪ್ರಸಿದ್ದ ಜ್ಯೋತಿಷ್ಯ, ಪುರೋಹಿತರಾದ ಕಲಾಸೇವಕ ಶ್ರೀ ರಾಘವೇಂದ್ರ ಭಟ್‌ ಅವರ ಪ್ರಾಯೋಜಕತ್ವದಲ್ಲಿ, ಈ  ಯಕ್ಷಗಾನ ಪ್ರದರ್ಶನವು ಪುಣೆಯ ಕೇತ್ಕರ್‌ರೋಡ್‌ನ‌ ಶ್ಯಾಮ್‌ರಾವ್‌ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾಗೃಹದಲ್ಲಿ ಇತ್ತೀಚೆಗೆ ತುಂಬಿದ ಸಭಾಂಗಣದಲ್ಲಿ   ಪ್ರದರ್ಶನಗೊಂಡು ಕಲಾಭಿಮಾನಿಗಳ ಮನಸೂರೆಗೊಂಡಿತು.

ಹೊಸಮೂಲೆ ಗಣೇಶ್‌ ಭಟ್‌ ಅವರ ಇಂಪಾದ  ಭಾಗವತಿಕೆ  ಮತ್ತು ಪಡ್ರೆ ಶ್ರೀಧರ ಅವರ  ಚೆಂಡೆ, ಸುದಾಸ್‌ ಕಾವೂರು ಅವರ ಮೃದಂಗದ  ಹಿಮ್ಮೇಳದೊಂದಿಗೆ ಯಕ್ಷರಂಗದ ಹೆಸರಾಂತ  ಕಲಾವಿದರಾದ ಕುಂಬ್ಳೆ ಶ್ರೀಧರ್‌  ರಾವ್‌ ಅವರ  ಬಪ್ಪಬ್ಯಾರಿ, ರಾಜ್ಯ ಪ್ರಶಸ್ತಿ ವಿಜೇತ ನಿಡ್ಲೆ ಗೋವಿಂದ ಭಟ್‌ ಅವರ ದಾರಿಕಾಸುರ 2, ಅಮ್ಮುಂಜೆ ಮೋಹನ್‌ ಅವರ  ದಾರಿಕಾಸುರ 1, ಉದಯಕುಮಾರ… ಅಡ್ಯನಡ್ಕ ಅವರ ವಿಷ್ಣು, ರಘುನಾಥ್‌ ನಲ್ಲೂರುರವರ ದೇವೇಂದ್ರ, ನಿಡ್ಲೆ ನಾರಾಯಣ ಭಟ್‌ ಅವರ ಗುಳಿಗ ಪಾತ್ರ, ಕೆದಿಲ ಜಯರಾಂ ಭಟ್‌ ಅವರ ಶ್ರೀದೇವಿ ಮತ್ತು ಇನ್ನಿತರ ಕಲಾವಿದರ ಮನೋಜ್ಞ ಅಭಿನಯವು ಕಲಾ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು. ತುಂಬಿದ ಸಭಿಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ ಬಾಲಕೃಷ್ಣ ಮಣಿಯಾಣಿರವರ ಹಾಸ್ಯ ಪಾತ್ರವು ಮೆಚ್ಚುಗೆ ಪಡೆಯಿತು. ಸಂದೀಪ್‌ ಕೋಳ್ಯೂರು, ವಸಂತ್‌ ಗೌಡ, ಪುತ್ತೂರು ಗಂಗಾಧರ ನವೀನ ಶೆಟ್ಟಿ, ಶಿವ ಪ್ರಸಾದ್‌ ಭಟ್‌, ಕುಸುಮೊದರ,  ಅರಳ ಗಣೇಶ್‌ ಶೆಟ್ಟಿ, ಗೌತಮ  ಹಾಗೂ ಇತರ ಉದಯೋನ್ಮುಖ   ಕಲಾವಿದರ ಕೂಡುವಿಕೆಯಲ್ಲಿ ನಡೆದ  ಈ ಯಕ್ಷಗಾನ ಪ್ರದರ್ಶನವು ಉತ್ತಮವಾಗಿ ಮೂಡಿ ಬಂದಿತು.

Advertisement

  ಹರೀಶ್‌ ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next