ಹೊಸದಿಲ್ಲಿ: ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ಅಮೋಘ ಆಟದಿಂದಾಗಿ ಡೆಲ್ಲಿ ತಂಡವು ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು 55 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಶ್ರೇಯಸ್ ಕೇವಲ 40 ಎಸೆತಗಳಿಂದ 93 ರನ್ ಸಿಡಿಸಿ ಅಜೇಯರಾಗಿ ಉಳಿದರು. ನಾಯಕತ್ವದ ಪಾದಾರ್ಪಣೆಗೈದ ಪಂದ್ಯದಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಪೇರಿಸಿದ ಆಟಗಾರರೆಂಬ ಗೌರವಕ್ಕೆ ಶ್ರೇಯಸ್ ಪಾತ್ರರಾಗಿದ್ದಾರೆ.
ಡೆಲ್ಲಿ ತಂಡ ಗೆಲುವು ದಾಖಲಿಸುವ ಈ ಪ್ರಯತ್ನದ ವೇಳೆ ನಾನೆಂದೂ ಒತ್ತಡಕ್ಕೆ ಒಳಗಾಗಿಲ್ಲ. ಡೆಲ್ಲಿಗೆ ಮೊದಲ ಗೆಲುವು ಸಿಗುವಾಗಿನ ಅನುಭವ ಅದ್ಭುತವಾಗಿದೆ. ಇಂತಹ ಅನುಭವ ಈ ಹಿಂದೆ ಸಿಕ್ಕಿಲ್ಲ ಎಂದು ಶ್ರೇಯಸ್ ಹೇಳಿದ್ದಾರೆ
ಕಾಲಿನ್ ಮುನ್ರೊ ಮತ್ತು ಪೃಥ್ವಿ ಶಾರ ಅವರ ಅಮೋಘ ಆಟಕ್ಕೂ ಶ್ರೇಯಸ್ ಮೆಚುjಗೆ ಸೂಚಿಸಿದರು. ಪೃಥ್ವಿ ಉತ್ತಮವಾಗಿ ಆಡುವ ಮೂಲಕ ಡೆಲ್ಲಿಗೆ ಭರ್ಜರಿ ಆರಂಭ ಒದಗಿಸಿದರು. ಅವರ ಉತ್ತಮ ಆರಂಭದಿಂದಾಗಿ ನಾವು ಬೃಹತ್ ಮೊತ್ತ ಪೇರಿಸಲು ನೆರವಾಯಿತು ಎಂದು ಶ್ರೇಯಸ್ ತಿಳಿಸಿದರು.
ಸತತ ಸೋಲಿನಿಂದ ಒತ್ತಡಕ್ಕೆ ಒಳಗಾಗಿದ್ದರಿಂದ ಗಂಭೀರ್ ಎರಡು ದಿನಗಳ ಹಿಂದೆ ನಾಯಕತ್ವ ತ್ಯಜಿಸಿದ್ದರು. ಅವರಲ ಬದಲಿಗೆ ಶ್ರೇಯಸ್ ಅವರನ್ನು ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ತವರಿನಲ್ಲಿ ಪಂದ್ಯದಲ್ಲಿ ಗಂಭೀರ್ ಆಟವಾಡುವ ಬಳಗದಿಂದಲೂ ದೂರ ಉಳಿದಿದ್ದರು. ಅವರ ಬದಲಿಗೆ ಕಾಲಿನ್ ಮುನ್ರೊ ಆಯ್ಕೆಯಾಗಿದ್ದು ಪೃಥ್ವಿ ಶಾ ಜತೆ ಇನ್ನಿಂಗ್ಸ್ ಆರಂಭಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.
ಅಗ್ರ ಕ್ರಮಾಂಕದ ಆಟಗಾರರ ಕಳಫೆ ಫಾರ್ಮ್ ಡೆಲ್ಲಿ ತಂಡದ ಇಷ್ಟರವರೆಗಿನ ಪ್ರಮುಖ ಸಮಸ್ಯೆಯಾಗಿತ್ತು. ಆದರೆ ಈ ಪಂದ್ಯದಲ್ಲಿ ಈ ಸಮಸ್ಯೆ ತತ್‌ಕ್ಷಣವೇ ಇತ್ಯರ್ಥವಾಗಿದೆ. ಮುನ್ರೊ ಮತ್ತು ಪೃಥ್ವಿ ಶಾ ಭರ್ಜರಿಯಾಗಿ ಆಡಿ ಮೊದಲ ವಿಕೆಟಿಗೆ 59 ರನ್ ಪೇರಿಸಿದ್ದರು. ಶಾ ಅವರನ್ನು ಸೇರಿಕೊಂಡ ಶ್ರೇಯಸ್ ದ್ವಿತೀಯ ವಿಕೆಟಿಗೆ 68 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಕೊನೆ ಹಂತದಲ್ಲಿ ಸ್ಫೋಟಕ ಆಟವಾಡಿದ ಶ್ರೇಯಸ್ ತಂಡದ 200 ಪ್ಲಸ್ ಮೊತ್ತಕ್ಕೆ ಕಾರಣರಾದರು.ಯೂ ಗೈಯ್ಸ (ಮುನ್ರೊ ಮತ್ತು ಪೃಥ್ವಿ) ನಮಗೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದೀರಿ. ಆಬಳಿಕ ತಂಡದ ಉತ್ತಮ ನಿರ್ವಹಣೆಯ ಹೊಣೆಯನ್ನು ನಾನು ವಹಿಸಿದೆ. ಸ್ನಿನ್ ದಾಳಿಯನ್ನು ಎದುರಿಸಲು ನನಗಿಷ್ಟ ಮತ್ತು ಚೆನ್ನಾಗಿ ಆಡಿದೆ ಎಂದು ಶ್ರೇಯಸ್ ಹೇಳಿದರು.