Advertisement

ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಗೌರವಾರ್ಪಣೆ

01:03 PM Apr 28, 2021 | Team Udayavani |

ಮುಂಬಯಿ: ಮೀರಾರೋಡ್‌ ಶ್ರೀ ಶನೀಶ್ವರ ಮಂದಿರದಲ್ಲಿ ತಿಂಗಳ ಮಂಗಳಾಧ್ಯಯ ಮಹಾಪೂಜೆಯು ಎ. 24 ರಂದು ಸಂಜೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಈ ಸಂದರ್ಭ ಶ್ರೀ ಶನೀಶ್ವರ ಭಜನ ಸಮಿತಿಯಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸುನಿಲ್‌ ಮತ್ತು ಸಂಧ್ಯಾ ನಾಯಕ್‌ ದಂಪತಿಯನ್ನು ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ವಿನೋದ್‌ ವಾಘಸೀಯಾ ಅವರಿಗೆ ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷೆ ವಿದ್ಯಾ ಅಶೋಕ್‌ ಕರ್ಕೇರ, ಉಪಾಧ್ಯಕ್ಷ ಗುಣಕಾಂತ್‌ ಶೆಟ್ಟಿ ಕರ್ಜೆ, ಕೋಶಾಧಿಕಾರಿ ಅಚ್ಯುತ ಕೋಟ್ಯಾನ್‌, ಜತೆ ಕೋಶಾಧಿಕಾರಿ ಭಾರತಿ ಅಂಚನ್‌, ಜಯಕರ ಶೆಟ್ಟಿ ಮುದ್ರಾಡಿ, ಪೂಜಾ ಸಮಿತಿಯ ಉಪಾಧ್ಯಕ್ಷೆ ಜಯಲಕ್ಷ್ಮೀ ಸುವರ್ಣ ಮತ್ತು ವಿಜಯಲಕ್ಷ್ಮೀ ಶೆಟ್ಟಿಗಾರ್‌, ಪೂಜಾ ಸಮಿತಿಯ ಜತೆ ಕೋಶಾಧಿಕಾರಿ ಶಕುಂತಳಾ ಶೆಟ್ಟಿ, ಮಹಿಳಾ ವಿಭಾಗದ
ರಿಷಿಕಾ ಮೂಲ್ಯ, ಹರಿ ಅಮೀನ್‌, ದಿನೇಶ್‌ ಶೆಟ್ಟಿಗಾರ್‌, ಮಹಾಬಲ ಸುವರ್ಣ, ಕರಾವಳಿ ಸೌಂಡ್‌ನ‌ ದಿನೇಶ್‌
ಸುವರ್ಣ, ಪುರುಷೋತ್ತಮ ಮೊದಲಾದವರು ಸಹಕರಿಸಿದರು.

ಯುವ ವಿಭಾಗದ ಜಯೇಶ್‌ ಸುವರ್ಣ, ಕಾವ್ಯಾ ಶೆಟ್ಟಿಗಾರ್‌, ಪ್ರಜ್ಞಾ ಶೆಟ್ಟಿಗಾರ್‌, ನಿಶಿತ್‌ ಮೂಲ್ಯ, ಅರ್ಚಕರಾದ ನಿರಾವ್‌ ಭಟ್‌ ಉಪಸ್ಥಿತರಿದ್ದು ಕಾರ್ಯಕ್ರಮದ
ಯಶಸ್ಸಿಗೆ ಸಹಕರಿಸಿದರು.

ಕೊರೊನಾ ನಿವಾರಣೆಗಾಗಿ ಜಯಲಕ್ಷ್ಮೀ ಸುವರ್ಣ ಅವರು ವಿಶೇಷ ರೀತಿಯಲ್ಲಿ ತಯಾರಿಸಿದ ಕಷಾಯ ಮತ್ತು ಲಘು ಉಪಾ ಹಾರದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಸದಾನಂದ ಪೂಜಾರಿ ಕಾರ್ಕಳ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣ ವಾಗಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next