ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಕ್ಕೆ ವಿಶ್ವಹಿಂದೂ ಪರಿಷತ್‌ನ ಪ್ರಮುಖರು ಭೇಟಿ ನೀಡಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ದೇಣಿಗೆಯನ್ನು ಚೆಕ್ ಮೂಲಕ ಸಂಘಟನೆ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ : 400 ಕೋಟಿ ರೂ. ಅನುದಾನಕ್ಕೆ ಮನವಿ
ನಂತರ ಮಾತನಾಡಿದ ಅವರು, ದೇಶದ ಜನರ ಹೃದಯ ಮಂದಿರದಲ್ಲಿ ಶ್ರೀ ರಾಮನು ತೋರಿದ ಜೀವನ ಮೌಲ್ಯಗಳು ನೆಲೆಗೊಳ್ಳಬೇಕು ಎಂಬುದು ಸಂತರ ಕರೆಯಾಗಿದೆ. ನಮ್ಮೆಲ್ಲರ ದೃಢಸಂಕಲ್ಪದಿಂದ ಭಾರತವನ್ನು ಮತ್ತೆ ರಾಮರಾಜ್ಯವನ್ನಾಗಿ ಮಾಡಬೇಕಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಬಾಳೆಹೊನ್ನೂರು ಸುತ್ತಮುತ್ತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ದೇಣಿಗೆ ಸಂಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಮಭಕ್ತರು ದೇಣಿಗೆ ಕೂಪನ್ ಸ್ವೀಕರಿಸಿ ಸಹಕರಿಸಿದ್ದಾರೆ, ಸಂಘಟನೆ ಕಾರ್ಯಕರ್ತರು ಹಾಗೂ ಪ್ರಮುಖರು ಸಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶ್ರೀರಾಮನ ಸೇವೆ ಮಾಡುತ್ತಿದ್ದಾರೆ. ರಾಮ ಮಂದಿರ ಕೇವಲ ಮಂದಿರವಾಗಿರದೇ ರಾಷ್ಟ್ರ ಮಂದಿರವಾಗಬೇಕು ಎಂಬ ಸಂಘಟನೆಯ ಕನಸು ನನಸಾಗುತ್ತಿರುವುದು ಪ್ರತಿಯೊಬ್ಬ ಹಿಂದೂಗಳಲ್ಲೂ ಅಭಿಮಾನ ತಂದಿದೆ ಎಂದರು.
ವಿಶ್ವ ಹಿಂದೂ ಪರಿಷತ್‌ನ ಕೆ.ಟಿ. ವೆಂಕಟೇಶ್, ಎಸ್.ಜಿ. ಕೃಷ್ಣಮೂರ್ತಿ, ಆರ್. ಡಿ. ಮಹೆಂದ್ರ ಇದ್ದರು.
ಇದನ್ನೂ ಓದಿ : ರಸ್ತೆ ಸುರಕ್ಷತಾ ಸಪ್ತಾಹ-ಜಾಥಾ