Advertisement

ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ‘ಭರಾಟೆ’ ಬೆಡಗಿ ಶ್ರೀಲೀಲಾ

02:53 PM Apr 28, 2021 | Team Udayavani |

ಕನ್ನಡದ ಭರಾಟೆ, ಕಿಸ್ ಸಿನಿಮಾಗಳ ಮೂಲಕ ಸಿನಿ ರಸಿಕರ ಮನ ಕದ್ದಿರುವ ನಟಿ ಶ್ರೀಲೀಲಾ ಇದೀಗ ತೆಲುಗು ಚಿತ್ರರಂಗಕ್ಕೆ ಹಾರಿದ್ದಾರೆ. ನಟ ಶ್ರೀಕಾಂತ್ ಅಭಿನಯದ ​ ‘ಪೆಳ್ಳಿ ಸಂದಡಿ’ ಸಿನಿಮಾದ ಸೀಕ್ವೆಲ್​ ಶೂಟ್​ ಈಗಾಗಲೇ ಕಂಪ್ಲೀಟ್​ ಆಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಶ್ರೀಲೀಲಾ ತೆಲುಗು ಇಂಡಸ್ಟ್ರಿಗೆ ಪಾದ ಬೆಳೆಸಿದ್ದಾರೆ.

Advertisement

ಪೆಳ್ಳಿ ಸಂದಡಿ ಚಿತ್ರದ ಮೊದಲ ಲಿರಿಕಲ್​ ಹಾಡು ಬಿಡುಗಡೆಯಾಗಿದ್ದು, ಶ್ರೀಲೀಲಾ ಸಖತ್ ಖುಷಿ ನೀಡಿದೆ. ​ಪೆಳ್ಳಿ ಸಂದಡಿ 2 ಚಿತ್ರಕ್ಕೆ ಗೌರಿ ರೋನಂಕಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಎಂ.ಎಂ ಕೀರವಾನಿ ಸಂಗೀತ ನೀಡಿದ್ದು, ಸದ್ಯ ಬಿಡುಗಡೆಯಾದ ಲಿರಿಕಲ್​ ಹಾಡಿಗೆ ಹರಿ ಚರಣ್​ ಹಾಗೂ ಶ್ವೇತ ಪಂಡಿತ್ ದನಿಯಾಗಿದ್ದಾರೆ.

ನಟ ಶ್ರೀಕಾಂತ್​ ಪುತ್ರ ರೋಷನ್​ ಶ್ರೀಲೀಲಾ ಅವರಿಗೆ ಜೋಡಿಯಾಗುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಟಿ ಶ್ರೀಲೀಲಾ ಹಾಗೂ ಧನ್ವೀರ್​ ಅಭಿನಯದ ‘ಬೈ ಟು ಲವ್’​ ಸಿನಿಮಾ ಮುಗಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next