ಚನ್ನರಾಯಪಟ್ಟಣ: ಶ್ರವಣ ಬೆಳಗೊಳ ಜೈನಮಠ ಪೀಠಾಧ್ಯಕ್ಷ ಜಿನೈಕ್ಯರಾಗಿರುವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಷಿಧಿ ಮಂಟಪದಲ್ಲಿ ಅವರು ಉಪಯೋಗಿ ಸುತ್ತಿದ್ದ ಚರಣ ಪಾದುಕೆಯನ್ನು ಗುರುವಾರ ಪ್ರತಿಷ್ಠಾಪನೆ ಮಾಡ ಲಾಯಿತು.
ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಅಭಿನವ ಚಾರುಶ್ರೀಗಳವರ ನೇತೃತ್ವ
ದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನೆರವೇರಿದವು.
ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿಯ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಭಟ್ಟಾರಕ ಚಾರು ಕೀರ್ತಿ ಸ್ವಾಮೀಜಿ, ತಮಿಳುನಾಡಿನ ಮೇಲ್ ಚಿತ್ತಮೂರಿನ ಭಟ್ಟಾರಕ ಸ್ವಾಮೀಜಿ, ವರೂರಿನ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಹೊಂಬುಜದ ದೇವೇಂದ್ರ ಭಟ್ಟಾರಕ ಸ್ವಾಮೀಜಿ, ಸೋಂದಾದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪುರದ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿಯ ವೃಷಭಸೇನಾ ಭಟ್ಟಾರಕ ಸ್ವಾಮೀಜಿ, ನಾಂದಣಿಯ ಜಿನಸೇನ ಭಟ್ಟಾರಕ ಸ್ವಾಮೀಜಿ, ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ,ಮಹರಾಷ್ಟ್ರ ರಾಜ್ಯದ ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ವಿಚಾರಪಟ್ಟ ಕ್ಷುಲ್ಲಕಶ್ರೀ ಪ್ರಮೇಯ ಸಾಗರ ಸ್ವಾಮೀಜಿ ಉಪಸ್ಥಿತರಿದ್ದರು.