Advertisement

ಕಲ್ಯಾಣಿ ಸ್ವಚ್ಛಗೊಳಿಸುವ ಮೂಲಕ ಅಪ್ಪುಗೆ ಶ್ರದ್ಧಾಂಜಲಿ

03:15 PM Nov 01, 2021 | Team Udayavani |

  ಕನಕಪುರ: ಸಾವಿರ ವರ್ಷಗಳ ಇತಿಹಾಸ ಹೊಂದಿ ರುವ ಭಿಮೇಶ್ವರ ದೇಗುಲದ ಕಲ್ಯಾಣಿಯಲ್ಲಿ ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ಸ್ವತ್ಛಗೊಳಿಸುವ ಮೂಲಕ ಅಗಲಿದ ನಟ ಪುನೀತ್‌ ರಾಜ್‌ ಕುಮಾರ್‌ಗೆ ಹಾರೋಹಳ್ಳಿ ಪೊಲೀಸರು, ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಗೌರವ ನಮನ ಸಲ್ಲಿಸಿದರು.

Advertisement

ಪರಿಸರ ಸ್ವತ್ಛತೆ ಬಗ್ಗೆ ಜಾಗೃತಿ: ಹಾರೋಹಳ್ಳಿ ಠಾಣೆಯ ವೃತ್ತನಿರೀಕ್ಷಕ ಮಲ್ಲೇಶ್, ಪಿಎಸ್‌ಐ ಮುರಳಿ, ಪಪಂ ಮುಖ್ಯ ಅಧಿಕಾರಿ ನವೀನ್‌ ಕುಮಾರ್‌ ನೇತೃತ್ವದಲ್ಲಿ ಪಪಂ ಮತ್ತು ಹಾರೋಹಳ್ಳಿ ಆರಕ್ಷಕ ಸಿಬ್ಬಂದಿ ಕಲ್ಯಾಣಿ ಸ್ವತ್ಛತೆ ಮಾಡುವ ಮೂಲಕ ಅಗಲಿದ ನೆಚ್ಚಿನ ನಟ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಸಮಾಜಮುಖೀ ಕಾರ್ಯದ ಮೂಲಕ ಶ್ರದ್ಧಾಂಜಲಿ: ನಟ ಪುನೀತ್‌ ರಾಜಕುಮಾರ್‌ ಸರಳ, ಸಜ್ಜನಿಕೆಗೆ ಹೆಸರಾದವರು. ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ಅವರದು. ಸಮಾಜಮುಖೀ ಕಾರ್ಯದ ಮೂಲಕ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂಬ ಸಂಕಲ್ಪದಿಂದ ಹಾರೋಹಳ್ಳಿ ಪೊಲೀಸರು, ಸ್ಥಳೀಯ ಅಧಿಕಾರಿ ವರ್ಗಕ್ಕೆ ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌, ಪ್ರಗತಿ ಶಾಲೆಯ ಶಿವನಂಜಪ್ಪ, ಭೀಮೇಶ್ವರ ದೇಗುಲದ ಕಲ್ಯಾಣಿಗೆ ಮರುಜೀವ ಕೊಡಲು ಶ್ರಮಿಸಿದ್ದಾರೆ.

ಇದನ್ನೂ ಓದಿ;- ಮಾನವೀಯ ಮೌಲ್ಯದ ಶಿಕ್ಷಣ ಅಗತ್ಯ:ದಿನೇಶ್‌

ಕಲ್ಯಾಣಿ ನಿರ್ವಹಣೆ ಕೊರತೆ: ಐತಿಹಾಸಿಕ ಭೀಮೇಶ್ವರ ದೇಗುಲದ ಮುಂಭಾಗದಲ್ಲಿ ಸುಮಾರು ನೂರು ಅಡಿ ಸುತ್ತಳತೆ ಹಾಗೂ 15 ಅಡಿ ಅಳವಾದ ಕಲ್ಯಾಣಿಯಲ್ಲಿ ಗಿಂಡಗಂಟಿಗಳು ಬೆಳೆದಿತ್ತು. ಈ ಹಿಂದೆ ನೂರಾರು ಭಕ್ತರು ದೇಗುಲಕ್ಕೆ ಬರುತ್ತಿದ್ದರು. ಕಾರ್ತಿಕ ಮಾಸದಲ್ಲಿ ಕಲ್ಯಾಣಿಯಲ್ಲಿ ನೂರಾರು ದೀಪಗಳನ್ನು ಭಕ್ತರು ಬೆಳಗುತ್ತಿದ್ದರು. ಕಳೆದ 10 ವರ್ಷಗಳಿಂದ ಸಂಪನ್ಮೂಲದ ಕೊರತೆಯಿಂದ ಕಲ್ಯಾಣಿ ನಿರ್ವಹಣೆ ಇಲ್ಲದೆ ಸೊರಗಿ ತನ್ನ ಸ್ವರೂಪ ಕಳೆದುಕೊಂಡಿತ್ತು.

Advertisement

ಶ್ರದ್ಧಾಂಜಲಿ: ಭೀಮೇಶ್ವರ ದೇಗುಲದ ಬಳಿ ಅಪ್ಪು ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಲ್ಯಾಣಿಯ ಸ್ವತ್ಛತಾ ಕಾರ್ಯ ಮಾಡಲಾಯಿತು. ಅಲ್ಲದೇ ಇನ್ನು ಮೂರು ದಿನಗಳಲ್ಲಿ ಕಾರ್ತಿಕ ಮಾಸವೂ ಆರಂಭವಾಗಲಿದ್ದು ಭಕ್ತರು ಕಲ್ಯಾಣಿಯಲ್ಲಿ ದೀಪ ಬೆಳಗಲು ಅನುಕೂಲವಾಗಿದೆ. ಸಮಾಜಮುಖೀ ಕಾರ್ಯಗಳ ಮೂಲಕವು ಅಗಲಿದ ಗಣ್ಯರನ್ನು ಸ್ಮರಿಸುವ ಮೂಲಕ ಹಾರೋಹಳ್ಳಿ ಪೊಲೀಸರು ಮಾದರಿಯಾಗಿದ್ದಾರೆ. ಈ ಸ್ವಚ್ಚತಾ ಕಾರ್ಯದಲ್ಲಿ ಹಾರೋಹಳ್ಳಿ ವೃತ್ತನಿರೀಕ್ಷಕ ಮಲ್ಲೇಶ್‌, ಪಿಎಸ್‌ಐ ಮುರಳಿ, ಎಎಸ್‌ಐ ಪ್ರಭುಸ್ವಾಮಿ, ಪಪಂ ಮುಖ್ಯಅಧಿಕಾರಿ ನವೀನ್‌ ಕುಮಾರ್‌, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರುಳಿಧರ್‌, ಪ್ರಗತಿ ಶಾಲೆಯ ಶಿವನಂಜಪ್ಪ, ನಿವೃತ್ತ ಪ್ರೊ.ಪುಟ್ಟರಾಜು, ಹಾರೋಹಳ್ಳಿ ಠಾಣೆ ಸಿಬ್ಬಂದಿ ಬಾಲಾಜಿ, ಹನುಮಂತು, ಭೈರೇಗೌಡ, ಜಯರಾಮ್‌, ಮಲ್ಲಪ್ಪ, ಪ್ರಕಾಶ್‌, ವಿಶ್ವ, ಮಲ್ಲಿಕಾರ್ಜುನ್‌ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next