Advertisement

ಶ್ರದ್ಧಾ ವಾಲ್ಕರ್‌ ಪ್ರಕರಣ: ನಾಳೆ ಆರೋಪಿ ಅಫ್ತಾಬ್‌ ಮಂಪರು ಪರೀಕ್ಷೆ

08:30 PM Nov 19, 2022 | Team Udayavani |

ನವದೆಹಲಿ: ಶ್ರದ್ಧಾ ವಾಲ್ಕರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ನವದೆಹಲಿಯ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಸೋಮವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದೆಹಲಿ ನ್ಯಾಯಾಲಯವು ಮಂಗಳವಾರದವರೆಗೆ ಆರೋಪಿ ಅಫ್ತಾಬ್‌ನನ್ನು ಪೊಲೀಸರ ವಶಕ್ಕೆ ನೀಡಿದೆ. ಇದರ ಒಳಗೆ ಮಂಪರು ಪರೀಕ್ಷೆ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಅಲ್ಲದೇ ಆತನ ವಿಚಾರಣೆಗಾಗಿ ಮತ್ತಷ್ಟು ದಿನಗಳು ತಮ್ಮ ವಶಕ್ಕೆ ನೀಡಬೇಕೆಂದು ಕೋರ್ಟ್‌ ಎದುರು ಪೊಲೀಸರು ಮನವಿ ಮಾಡಿಕೊಳ್ಳುವ ಸಾಧ್ಯತೆಯಿದೆ.

ಚಾಕು ವಶಕ್ಕೆ:
ಇನ್ನೊಂದೆಡೆ, ಗುರುಗ್ರಾಮದಿಂದ ಮೂರು ಎಲುಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಶ್ರದ್ಧಾಳದ್ದು ಎನ್ನಲಾಗಿದೆ. ಜತೆಗೆ ಮೃತದೇಹವನ್ನು 35 ತುಂಡುಗಳನ್ನಾಗಿಸಲು ಆರೋಪಿ ಬಳಸಿದ್ದಾನೆ ಎನ್ನಲಾದ ಚಾಕು ಮತ್ತು ಇತರೆ ಹರಿತವಾದ ವಸ್ತುಗಳನ್ನು ಅಫ್ತಾಬ್‌ ಪ್ಲಾಟ್‌ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಶ್ರದ್ಧಾ ಮತ್ತು ಅಫ್ತಾಬ್‌ನ ಬಟ್ಟೆಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹರಿತವಾದ ವಸ್ತು ಹಾಗೂ ಬಟ್ಟೆಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ:
ಅ.18ರ ಬೆಳಗಿನ ಜಾವ ಅಫ್ತಾಬ್‌ ತನ್ನ ಮನೆಯ ಮಾರ್ಗದಲ್ಲಿ ಬ್ಯಾಗ್‌ ಸಮೇತ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಒಂದರಲ್ಲಿ ಸೆರೆಯಾಗಿದೆ. ಶ್ರದ್ಧಾ ಮೃತದೇಹದ ಭಾಗಗಳನ್ನು ಕಾಡಿಗೆ ಬಿಸಾಕಲು ಆತ ಬ್ಯಾಗ್‌ ಸಮೇತ ಹೋಗುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ, 2020ರಲ್ಲಿ ಶ್ರದ್ಧಾ ಮೇಲೆ ಆರೋಪಿ ಹಲ್ಲೆ ನಡೆಸಿದ್ದ ಸಂದರ್ಭದಲ್ಲಿ ಆಕೆಯ ನೆರವಿಗೆ ಬಂದಿದ್ದ ಇಬ್ಬರು ಸ್ನೇಹಿತರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸ್ಕ್ವಾಡ್‌ ರಚನೆ:
ಶ್ರದ್ಧಾ ರೀತಿ ಮನೆಯಿಂದ ಓಡಿಬಂದು ಸಮಸ್ಯೆಗಳನ್ನು ಎದುರಿಸುತ್ತಿರುವ ಯುವತಿಯರ ನೆರವಿಗಾಗಿ ರಾಜ್ಯ ಮಹಿಳಾ ಆಯೋಗದಡಿಯಲ್ಲಿ ಸ್ಕ್ವಾಡ್‌ ರಚಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next