Advertisement

ಜಿಲ್ಲಾದ್ಯಂತ ತಂಪೆರೆದ ತುಂತುರು ಮಳೆ

02:10 PM Jun 11, 2018 | Team Udayavani |

ತುಮಕೂರು: ಜಿಲ್ಲೆಯ ರೈತರಿಗೆ ಹರ್ಷ ನೀಡುವಂತೆ ಜಿಲ್ಲೆಯ 10 ತಾಲೂಕುಗಳಲ್ಲೂ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಆಗಿಂದಾಗ್ಗೆ ತುಂತುರು ಮಳೆ ನಗರದಲ್ಲಿ ಬಿದ್ದರೆ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ ಆಗಿದೆ. ತುಂತುರು ಮಳೆಯಿಂದ ಜನರು ಕೊಡೆ ಹಿಡಿದುಕೊಂಡು ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ. 

Advertisement

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಹದ ಮಳೆಯಾಗಿದ್ದು, ಸುಡು ಬಿಸಿಲಿನ ಬೇಸಿಗೆಯಿಂದ ನೊಂದಿದ್ದ ನಾಗರಿಕರಿಗೆ ವರ್ಷಧಾರೆ ಹರ್ಷ ನೀಡಿ ಭೂಮಿಯನ್ನು ತಂಪಾಗಿರಿಸಿದೆ. ಈಗಾಗಲೇ ರಾಜ್ಯದಲ್ಲಿ  ಮುಂಗಾರು ಮಳೆ ಎಲ್ಲಡೆ ದಾರಾಕಾರವಾಗಿ  ಬರುತ್ತಿರುವಂತೆಯೇ  ಜಿಲ್ಲೆಯಲ್ಲೂ ಅಲಲ್ಲಿ ಸಾಧಾರಣ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ತಂಪಾದ ವಾತಾವರಣವಿದ್ದು ಮಳೆಯಾಗುತ್ತಿದೆ. 

ನಗರದಲ್ಲಿ ಕಳೆದ ಎರಡು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ತುಂತುರು ಮಳೆಯಿಂದ ಚಳಿಯ ವಾತಾವರಣ ನಗರದಲ್ಲಿದ್ದು. ಜನರು ಬೆಚ್ಚನೆಯ ಜರ್ಕಿನ್‌ ತೊಟ್ಟು ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಜನರು ಕೊಡೆಗಳನ್ನು ಹಿಡಿದು  ಓಡಾಡುತ್ತಿರುವುದು ಕಂಡು ಬಂದಿತ್ತು. 

ರಸ್ತೆಯಲ್ಲೆಲ್ಲಾ ಹರಿದ ನೀರು: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುತ್ತಿದೆ ಕೆಲವು ಕಡೆ ಚಿಟಿಪಿಟಿ ಮಳೆಯಿಂದ ಕಿಚಿಪಿಚಿ ಕೆಸರು ಉಂಟಾಗಿದೆ. ಓಡಾಡುವುದಕ್ಕೆ ತೊಂದರೆ ಉಂಟಾಗುತ್ತಿದೆ.  ಮಳೆ ಉತ್ತಮವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಚುರುಕುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next