Advertisement
ಈ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
Related Articles
Advertisement
ಯಾರ ಪ್ರಭಾವಕ್ಕೂ ಜಗ್ಗದಿರಿ
ಅನಧಿಕೃತ ಕಟ್ಟಡಗಳ ತೆರವು ವಿಚಾರದಲ್ಲಿ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಮುಲಾಜು ಬೇಡ, ಯಾರಿಗೂ ಹೆದರದಿರಿ ಮತ್ತು ಯಾವ ಪ್ರಭಾವಕ್ಕೂ ಜಗ್ಗದಿರಿ. ಕಾಗದದಲ್ಲಿ ಹೇಳಿರುವುದು ನಿಜವಾಗಿರಬಹುದು.
ಆದರೆ, ನ್ಯಾಯಾಲಯಕ್ಕೆ ಅದಕ್ಕಿಂತ ಮುಖ್ಯವಾಗಿ ಫಲಿತಾಂಶ ಬೇಕು. ಪಾಲಿಕೆ ಕೈಗೊಂಡ ಕ್ರಮಗಳು ನೆಲದ ಮೇಲೆ ಕಾಣಬೇಕು ಎಂದು ನ್ಯಾಯಪೀಠ ಹೇಳಿತು. ಅದಕ್ಕೆ ಪಾಲಿಕೆ ಪರ ವಕೀಲರು ಉತ್ತರಿಸಿ ಯಾವ ಪ್ರಭಾವಕ್ಕೂ ಪಾಲಿಕೆ ಬಗ್ಗುವುದಿಲ್ಲ, ಪ್ರಭಾವಿಗಳ ವಿರುದ್ಧವೂ ಕ್ರಮ ಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.
5000 ಕಟ್ಟಡಗಳಿಂದ ನಿಯಮ ಉಲ್ಲಂಘನೆ
ವಿಚಾರಣೆ ವೇಳೆ ಪಾಲಿಕೆ ಮುಖ್ಯ ಆಯುಕ್ತರ ಪ್ರಮಾಣವನ್ನು ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಬಿಬಿಎಂಪಿ ಪರ ಹಿರಿಯ ನ್ಯಾಯವಾದಿ ಡಿ.ಎನ್. ನಂಜುಂಡರೆಡ್ಡಿ ವಾದ ಮಂಡಿಸಿ, 2021ರ ನ.30ರವರೆಗೆ 1,31,745 ಅನ ಧಿಕೃತ ಕಟ್ಟಡಗಳು (ನಕ್ಷೆ ಅನುಮೋದನೆ ಪಡೆಯದ) ಸಮೀಕ್ಷೆ ಮಾಡಲಾಗಿದ್ದು, 16,286 ಕಟ್ಟಡಗಳ ಮಾಲೀಕರಿಗೆ ದಾಖಲೆ ಸಲ್ಲಿಸಲು ಬಿಬಿಎಂಪಿ ಕಾಯ್ದೆ ಸೆಕ್ಷನ್ 313 ಪ್ರಕಾರ ನೋಟಿಸ್ ನೀಡಲಾಗಿದೆ.
ಈವರೆಗೆ 1,712 ಕಟ್ಟಡಗಳ ಮಾಲೀಕರು ನೋಟಿಸ್ ಗೆ ಉತ್ತರ ನೀಡಿದ್ದಾರೆ. ಇನ್ನುಳಿದ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು. ಅಲ್ಲದೆ, 2020ರ ಜನವರಿ 1ರಿಂದ 2021ರ ಜು.30ವರೆಗೆ ಪಾಲಿಕೆ 8,496 ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆಯನ್ನು ಮಂಜೂರಾತಿ ಮಾಡಿದೆ.
ಆ ಪೈಕಿ 7,245 ಕಟ್ಟಡಗಳ ಸರ್ವೇ ಮಾಡಲಾಗಿದ್ದು, 5,341 ಕಟ್ಟಡಗಳು ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದ್ದು, 2,656 ಕಟ್ಟಡಗಳಿಗೆ ಸೆಕ್ಷನ್ 313 ಅಡಿ ನೋಟಿಸ್ ನೀಡಲಾಗಿದೆ, ಈವರೆಗೆ 733 ಮಾಲೀಕರು ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇನ್ನೂ ಕನಿಷ್ಠ ಮೂರು ತಿಂಗಳು ಕಾಲಾವಕಾಶ ನೀಡಬೇಕೆಂದರು.
ವಾರ್ಡ್ ಮಟ್ಟದಲ್ಲಿ ತಂಡ ರಚನೆ: ಬಿಬಿಎಂಪಿ ಅನ ಕೃತ ಕಟ್ಟಡಗಳ ತೆರವು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ, ವಾರ್ಡ್ ಮಟ್ಟದಲ್ಲಿ ಕಟ್ಟಡಗಳ ಸರ್ವೆ ಮಾಡಲು ಎಂಜಿನಿಯರ್‌ಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ.
ಪ್ರತಿದಿನ ಈ ವಿಚಾರದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವ ಕ್ರಿಯಾ ಯೋಜನೆ ಹಾಕಿಕೊಳ್ಳಲಾಗಿದೆ. ಕಾನೂನು ರೀತಿಯಲ್ಲಿ ಅಂತಹ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.