Advertisement

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

02:36 PM Sep 07, 2024 | Team Udayavani |

ಬಾಲ್ಯದ ದಿನಗಳು ಎಲ್ಲರ ಜೀವನದಲ್ಲಿ ಒಂದು ರೀತಿಯ ಅವಿಸ್ಮರಣೀಯ ಅವಧಿಯಾಗಿದೆ. ಆ ದಿನಗಳಲ್ಲಿನ ಆಟ ,ಪಾಠ ತುಂಟಾಟ, ಕುಟುಂಬದೊಂದಿಗೆ ಕಳೆದ ಸಮಯ ಎಲ್ಲವೂ ಒಂದು ರೀತಿಯ ಅದ್ಭುತವೇ ಸರಿ.

Advertisement

ತಾಯಿಯ ಮಮತೆ, ತಂದೆಯ ಮಾರ್ಗದರ್ಷನ, ಸಹೋದರಿಯೊಂದಿಗೆ ಕಳೆದ ಸುಂದರ ಸಮಯ ಆಗಾಗ ಮಾಡುತ್ತಿದ್ದ ಜಗಳ ಎಲ್ಲವೂ ನೆನಪಿಗೆ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನ ಕೈಯಿಂದ ಪೆಟ್ಟು ತಿಂದ ಏಟುಗಳು ಎಷ್ಟೋ,ಅಪ್ಪನಿಂದ ತಿಂದ ಬೈಗುಳಗಳೆಷ್ಟೋ? ಅದೆಷ್ಟೋ ಬಾರಿ ಪೆಟ್ಟು ಕೊಟ್ಟ ಅಮ್ಮ ಕೋಪ ಕಡಿಮೆ ಆದಮೇಲೆ ಪ್ರೀತಿಯಿಂದ ಕರೆದು ಕೈತುತ್ತು ತಿನ್ನಿಸುತ್ತಿದ್ದಳು.ಇದೆ ಅಲ್ಲವೇ ತಾಯಿಯ ಪ್ರೀತಿ.

ಮಳೆಗಾಲದ ಸಮಯದಲ್ಲಿ ಮಕ್ಕಳೊಂದಿಗೆ ಸೇರಿ ತೋಡಿಗೆ ಮೀನು ಹಿಡಿಯಲು ಹೋಗುತ್ತಿದ್ದ ದಿನಗಳು .ಕೆಸರಿನಲ್ಲಿ ಮಿಂದೆದ್ದ ಕ್ಷಣಗಳನ್ನು ನೆನೆದರೆ ಇಂದಿಗೂ ತುಟಿಯಂಚಿನಲ್ಲಿ ನಗು ಮೂಡುವುದಂತೂ ಖಂಡಿತ . ಅದೆಷ್ಟು ಚೆನ್ನಾಗಿತ್ತು ಆ ಬಾಲ್ಯದ ದಿನಗಳು .ಯಾವುದೇ ಚಿಂತೆ ಇಲ್ಲದೆ .ಭವಿಷ್ಯದ ಬಗ್ಗೆ ಸರಿಯಾದ ಯೋಚನೆ ಇಲ್ಲದೆ. ಮನೆಯ ಮುದ್ದಿನ ಮಕ್ಕಳಾಗಿ, ಎಲ್ಲರಿಂದಲೂ ಪ್ರೀತಿಯ ಗಳಿಸಿಕೊಂಡು ಇದ್ದ ದಿನಗಳೇ ಈ ಬಾಲ್ಯದ ದಿನಗಳು .

ಸಮಯ ಹಾಗೆ ಸ್ವಲ್ಪ ಹಿಂದೆ ಸರಿದು ಪುನಃ ಬಾಲ್ಯದ ದಿನಗಳು ಮರಕಳಿಸಿದರೆ ಅದು ಎಷ್ಟು ಚಂದ ಅಲ್ವಾ? ಮನೆಯ ಜಗಲಿ ಮೇಲೆ ಕುಳಿತು ಆ ದಿನಗಳನ್ನೆಲ್ಲ ನೆನೆಸಿಕೊಂಡಾಗ ಈ ಬಾಲ್ಯ ಮತ್ತೂಮ್ಮೆ ಮರುಕಳಿಸಿ ಬಾರದೆ ಎಂದೆನಿಸುತ್ತದೆ. ಹಿಮಾಲಿ ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next