Advertisement
ಜಮ್ಮು ಮತ್ತು ಕಾಶ್ಮೀರದ ರಾಮ್‌ಬನ್‌ನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್ “ಒಮರ್ ಅಬ್ದುಲ್ಲಾ ಅವರು ಇಂತಹ ಹೇಳಿಕೆಗಳನ್ನು ನೀಡಿರುವುದು ದುರದೃಷ್ಟಕರವಾಗಿದೆ, ಅಫ್ಜಲ್ ಗುರುವನ್ನು ಗಲ್ಲಿಗೇರಿಸಬಾರದಾಗಿದ್ದರೆ, ನಾವು ಏನು ಮಾಡಬೇಕಿತ್ತು? ನಾವು ಅವರಿಗೆ ಸಾರ್ವಜನಿಕವಾಗಿ ಹಾರ ಹಾಕಿ ಸಮ್ಮಾನಿಸಬೇಕೇ?” ಎಂದು ಪ್ರಶ್ನಿಸಿದ್ದಾರೆ.
Related Articles
Advertisement
ಉಗ್ರವಾದ ನಿಲ್ಲಿಸಿದರೆ ಪಾಕ್ ಜತೆ ಮಾತುಕತೆಪಾಕ್ ಜತೆ ಮಾತುಕತೆ ನಡೆಸಬೇಕೆಂದು ಹಲವರು ಹೇಳುತ್ತಾರೆ. ಅದಕ್ಕೆ ಮೊದಲು ಪಾಕ್ ಉಗ್ರವಾದವನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ನೆರೆಯ ರಾಷ್ಟ್ರದೊಂದಿಗೆ ಒಳ್ಳೆಯ ಸಂಬಂಧವಿರಬೇಕೆಂದು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಅದಕ್ಕೆ ಮುನ್ನ ಪಾಕ್ ಈ ಷರತ್ತನ್ನು ಪಾಲಿಸಬೇಕು. ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ಶೇ. 85ರಷ್ಟು ಮಂದಿ ಮುಸ್ಲಿಮರೇ ಬಲಿಯಾಗಿದ್ದಾರೆ. ನಾನು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನನಗೆ ವಾಸ್ತವ ತಿಳಿದಿದೆ ಎಂದರು. ಒಮರ್ ಅಬ್ದುಲ್ಲಾ ಅವರು ”ಅಫ್ಜಲ್ ಗುರುವನ್ನು ಗಲ್ಲಿಗೇರಿಸುವುದಕ್ಕೆ ಯಾವುದೇ ಉದ್ದೇಶವಿಲ್ಲ ಎಂದು ನಂಬಿದ್ದೇನೆ ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ಸರಕಾರವು ಆತನನ್ನು ಗಲ್ಲಿಗೇರಿಸುವುದನ್ನು ಅನುಮೋದಿಸುತ್ತಿರಲಿಲ್ಲ ಎಂದು ಹೇಳಿದ್ದರು. 2001,ಡಿಸೆಂಬರ್ 13 ರಂದು ಸಂಸತ್ ಭವನದ ಮೇಲಿನ ದಾಳಿಯ ಸಂಚು ರೂಪಿಸಿದ್ದಕ್ಕಾಗಿ 2013 ಫೆಬ್ರವರಿ 9 ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಗಿತ್ತು.