Advertisement
ಇತ್ತೀಚೆಗೆ ವಿಂಗ್ ಕಮಾಂಡರ್ ಮಿತ್ರಾ ಎನ್ನುವ 83 ವರ್ಷದ ನಿವೃತ್ತ ಯುದ್ಧ ವಿಮಾನ ಪೈಲಟ್ ಮೈಸೂರಿನಲ್ಲಿ ನಿಧನರಾದರು. ಯುದ್ಧ ವಿಮಾನದ ಹೆಸರಾಂತ ಪೈಲಟ್ ಓರ್ವರಿಗೆ ಅಂತಿಮ ನಮನ ಸಲ್ಲಿಸಲು ಜನರೇ ಇರಲಿಲ್ಲ ಎನ್ನುವ ಕುರಿತು ನಿವೃತ್ತ ವಿಂಗ್ ಕಮಾಂಡರ್ ಸುದರ್ಶನರವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ¨ªಾರೆ.
Related Articles
Advertisement
ಸೇವಾ ನಿವೃತ್ತ ಸೈನಿಕರ ಯೋಗಕ್ಷೇಮ ನೋಡಿಕೊಳ್ಳಲೆಂದೇ ಸೈನಿಕ ಕಲ್ಯಾಣ ಇಲಾಖೆ ಇದೆ. ಬೆಂಗಳೂರಿನಲ್ಲಿ ಮುಖ್ಯಾಲಯ ವನ್ನು ಹೊಂದಿದ ಇಲಾಖೆ 13 ಜಿಲ್ಲಾ ಸೈನಿಕ ಕಚೇರಿಗಳನ್ನೂ ಹೊಂದಿದೆ. 35-40ರ ಕಡಿಮೆ ವಯಸ್ಸಿನಲ್ಲಿ ಸೇವೆಯಿಂದ ಮುಕ್ತರಾಗುವ ನಿವೃತ್ತ ಸೈನಿಕರಿಗೆ ಪುನರ್ವಸತಿ ಕಲ್ಪಿಸುವ, ಅವರಿಗೆ ಬೇಕಾದ ಮಾರ್ಗದರ್ಶನ ಹಾಗೂ ಸಹಾಯ ನೀಡುವುದು ಜಿಲ್ಲಾ ಸೈನಿಕ ಕಚೇರಿಯ ಸ್ಥಾಪನೆಯ ಮೂಲ ಉದ್ದೇಶ. ಆದರೆ ಈ ಕಚೇರಿಗಳ ಉನ್ನತ ಅಧಿಕಾರಿಯಿಂದ ಹಿಡಿದು ಸಾಮಾನ್ಯ ಸಿಬ್ಬಂದಿಯವರೆಗೆ ತಮ್ಮ ಕರ್ತವ್ಯದ ಕುರಿತಾದ ಸ್ಪಷ್ಟ ಕಲ್ಪನೆ ಯಾರಿಗೂ ಇದ್ದಂತಿಲ್ಲ ಎನ್ನುವುದು ವಿಷಾದನೀಯ.
ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ದಾಖಲಾತಿ ಪಡೆಯಲು ಸಹಾಯ ಮಾಡುವ, ಸ್ಕಾಲರ್‌ಶಿಪ್ ಪಡೆಯಲು ಸಹಕರಿಸುವ, ಯುದ್ಧ ವಿಧವೆಯರ ಸಮಸ್ಯೆಗಳಿಗೆ ದನಿಯಾಗಬೇಕಾದ ಜಿಲ್ಲಾ ಸೈನಿಕ ಬೋರ್ಡ್ ಗಳಲ್ಲಿ ಕುಳಿತವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಕುರಿತು ದೂರು ಎÇÉೆಡೆಯಿಂದ ಕೇಳಿ ಬರುತ್ತಿದೆ. ಮಾಜಿ ಸೈನಿಕರ ಫೋನ್ ಕರೆಗಳಿಗೂ ಸೌಜನ್ಯದಿಂದ ಉತ್ತರಿಸುವುದಿಲ್ಲ. ಸಾಹೇಬರು ಈಗ ಬಿಜಿಯಾಗಿ¨ªಾರೆ ಆಮೇಲೆ ಕರೆ ಮಾಡಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ.
ಬೆಂಗಳೂರಿನಲ್ಲಿರುವ ಸೈನಿಕ ಕಲ್ಯಾಣ ಇಲಾಖೆಯ ನಿರ್ದೇಶಕರು ಕರ್ನಾಟಕದವರಾಗಿರಬೇಕೆಂಬ ನಿಯಮವಿದೆ. ಪ್ರಸ್ತುತ ನಿರ್ದೇಶಕರು ಪರಭಾಷೆಯವರಾಗಿದ್ದು, ಕನ್ನಡಿಗ ಮಾಜಿ ಸೈನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ . ಇತರ ಜಿಲ್ಲಾ ಸೈನಿಕ ಬೋರ್ಡ್‌ಗಳಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ. ನಿವೃತ್ತ ಸೈನಿಕರ ಮಕ್ಕಳಿಗೆ ಕೊಡಮಾಡುವ ಅಲ್ಪ ಮೊತ್ತದ ಸ್ಕಾಲರ್‌ಶಿಪ್ ಹಣಕ್ಕಾಗಿ ದೂರದ ಊರುಗಳಿಂದ ಸ್ವತಃ ಹಾಜರಾಗಬೇಕೆಂದು ಒತ್ತಾಯಿಸಲಾಗುತ್ತದೆ. ಇನ್ನು ಕೆಲವೆಡೆ ನೌಕರಿ ಕೊಡಿಸುವುದಾಗಿ ಹೇಳಿ ನಿವೃತ್ತ ಸೈನಿಕರನ್ನು ಶೋಷಿಸಲಾಗುತ್ತದೆ. ಮಾಜಿ ಸೈನಿಕರು ಮೃತರಾದ ಸಂದರ್ಭದಲ್ಲಿ ಅವರ ಪತ್ನಿಗೆ ನ್ಯಾಯೋಚಿತವಾಗಿ ಪೆನ್ಶನ್ ಸಿಗಬೇಕು. ಆ ಕುರಿತು ಕುಟುಂಬಕ್ಕೆ ಸಹಾಯ ಮಾಡಬೇಕಾದದ್ದು ಜಿಲ್ಲಾ ಸೈನಿಕ ಬೋರ್ಡಿನ ಕರ್ತವ್ಯ. ಸಹಾಯ ಮಾಡುವ ಬದಲಾಗಿ ಉದ್ಯೋಗಸ್ಥ ಮಹಿಳೆಗೆ ಆಕೆಯ ಪತಿಯ ಪೆನ್ಶನ್ ನೀಡಲು ಬರುವುದಿಲ್ಲ ಎಂದು ವೃಥಾ ಕಿರುಕುಳ ನೀಡಿದ ಉದಾಹರಣೆ ಇದೆ.
ಜಿಲ್ಲಾ ಸೈನಿಕ ಕಚೇರಿಯ ಉಪ ನಿರ್ದೇಶಕರು ಸಾಮಾನ್ಯವಾಗಿ ಮಾಜಿ ಸೇನಾಧಿಕಾರಿಗಳೇ ಆಗಿರುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರು ಸಕ್ರಿಯ ಸೇನಾ ಸೇವೆಯ ಗುಂಗಿನÇÉೇ ಇದ್ದಂತೆ ಕಾಣುತ್ತಾರೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿಯಲ್ಲಿ ತಮ್ಮ ಅಧಿಕಾರದ ದರ್ಪ ತೋರಿಸುವುದನ್ನು ನಿಲ್ಲಿಸಬೇಕಾಗಿದೆ. ತಾವಿರುವುದು ಮಾಜಿ ಸೈನಿಕರಿಗೆ ಸಹಾಯ ಮಾಡಲು ಎನ್ನುವ ವಾಸ್ತವವನ್ನು ಅವರು ಅರಿಯಲಿ. ಸರಕಾರ ಕನ್ನಡಿಗ ಮಾಜಿ ಸೈನಿಕ ಅಧಿಕಾರಿಗಳನ್ನೇ ನಿರ್ದೇಶಕ ಮತ್ತು ಉಪ ನಿರ್ದೇಶಕ ಹು¨ªೆಗಳಿಗೆ ಪರಿಗಣಿಸಲಿ. ನೌಕರಿ, ಸಹಾಯ, ಮಾರ್ಗದರ್ಶನ ನಿರೀಕ್ಷಿಸಿ ಬರುವ ಮಾಜಿ ಸೈನಿಕ ಹಾಗೂ ಅವರ ಅವಲಂಬಿತರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕೇಳುವಂತಾಗಲಿ. ಉದ್ಧಟತನದಿಂದ ವರ್ತಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ.
– ಬೈಂದೂರು ಚಂದ್ರಶೇಖರ ನಾವಡ