Advertisement

Politician ‘ರಾಜಕೀಯ’ ಮಾಡದೇ ಗೋಲಗಪ್ಪಾ ಮಾರಬೇಕಾ?: ಕಂಗನಾ ಪ್ರಶ್ನೆ

01:10 AM Jul 19, 2024 | Team Udayavani |

ಶಿಮ್ಲಾ: ರಾಜಕಾರಣಿಗಳು ರಾಜಕೀಯ ಮಾಡದೆ ಇನ್ನೇನು ಗೋಲ್‌ಗ‌ಪ್ಪಾ (ಪಾನಿಪೂರಿ) ಮಾರ ಲಾಗುತ್ತದೆಯೇ?
ಇದು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ನಟಿ, ಕಂಗನಾ ರಣಾವತ್‌ ಅವರ ಪ್ರಶ್ನೆ.

Advertisement

ಮಹಾರಾಷ್ಟ್ರದಲ್ಲಿಉದ್ಧವ್‌ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆಗೆ ವಂಚನೆ ಮಾಡಲಾಗಿದೆ ಎಂದು ಇತ್ತೀಚೆಗೆ ಜ್ಯೋತಿರ್ಮಠ ಶಂಕರಾಚಾರ್ಯರು ಹೇಳಿದ್ದರು. ಅದರ ಬೆನ್ನಲ್ಲೇ ಕಂಗನಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಶಿವಸೇನೆ ವಿಭಜನೆಯಾಗಿ ಉದ್ಧವ್‌ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿದರು. ಅನಂತರ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣ ಅಧಿಕಾರಕ್ಕೇರಿತ್ತು. ಈ ಬಗ್ಗೆ ಇತ್ತೀಚೆಗಷ್ಟೇ ಶಂಕರಾಚಾರ್ಯರು ಬೇಸರ ವ್ಯಕ್ತಪಡಿಸಿದ್ದರು.

ಉದ್ಧವ್‌ಗೆ ವಂಚನೆಯಾಗಿದೆ. ವಂಚಿಸುವವನು ಹಿಂದೂವಲ್ಲ ಎಂದಿದ್ದರು. ಇದಕ್ಕೆ ಕಂಗನಾ ಪ್ರತಿಕ್ರಿಯಿಸಿ, ಶಿಂಧೆ ಬಣವನ್ನು ಸಮರ್ಥಿಸಿಕೊಂಡಿದ್ದಾರೆ. “ರಾಜಕೀಯದಲ್ಲಿ ಮೈತ್ರಿಗಳು, ಒಪ್ಪಂದ ಹಾಗೂ ಪಕ್ಷ ವಿಭಜನೆ ಸಾಮಾನ್ಯ. ಕಾಂಗ್ರೆಸ್‌ ಪಕ್ಷ ಕೂಡ 1907ರಲ್ಲಿ ಮತ್ತು 1971ರಲ್ಲಿ ವಿಭಜನೆಯಾಗಿತ್ತು’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next