Advertisement
ಇದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದ್ದು, ನಿಯಮಗಳು ಹೀಗಿವೆ-*ಕಿರುಚಿತ್ರವನ್ನು ನಿಕಾನ್ ಡಿ-ಎಸ್‌ಎಲ್‌ಆರ್ ಕ್ಯಾಮೆರಾದಲ್ಲಿಯೇ ಚಿತ್ರೀಕರಿಸಿರಬೇಕು
*ಕಿರುಚಿತ್ರದ ಅವಧಿ 10 ನಿಮಿಷ ಮೀರಬಾರದು
*18 ವರ್ಷ ಮೇಲ್ಪಟ್ಟವರು ಮಾತ್ರ ಪಾಲ್ಗೊಳ್ಳಬಹುದು
*ಪ್ರವೇಶ ಪತ್ರ ಸಲ್ಲಿಸಲು ಮಾರ್ಚ್ 5 ಕೊನೆಯ ದಿನಾಂಕವಾಗಿದ್ದು www.iamnikon.in/shortsonnikon ನಲ್ಲಿ ಅರ್ಜಿ ಸಲ್ಲಿಸಬೇಕು.
* ಪ್ರಥಮ ಬಹುಮಾನ ನಿಕಾನ್ ಡಿ7500 ಹಾಗೂ ದ್ವಿತೀಯ ಬಹುಮಾನ ನಿಕಾನ್ ಡಿ5600 ಕ್ಯಾಮೆರಾ ನೀಡಲಾಗುತ್ತದೆ.
ಇದು ಸ್ಪರ್ಧೆಯ ಮೂರನೇ ಆವೃತ್ತಿಯಾಗಿದ್ದು, ಕಳೆದ ಎರಡು ಆವೃತ್ತಿಯಲ್ಲಿ 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಯಾವ ರೀತಿ ಕಿರುಚಿತ್ರ ನಿರ್ಮಿಸಬೇಕೆಂಬುದರ ಬಗ್ಗೆ, ನಿಕಾನ್‌ನ ವೆಬ್‌ಸೈಟ್‌ನಲ್ಲಿ (www.nikon.co.in) ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುತ್ತದೆ. ಚಿತ್ರ ನಿರ್ಮಾಣದ ತಾಂತ್ರಿಕತೆಗಳನ್ನೂ ಕಲಿತುಕೊಳ್ಳಬಹುದಲ್ಲದೆ, ಈ ಹಿಂದೆ ಪ್ರಶಸ್ತಿ ಪಡೆದ ಕಿರುಚಿತ್ರಗಳೂ ಇಲ್ಲಿವೆ.