Advertisement

ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಗೆ ಬೆಂಕಿ ಅಪಾರ ಸೊತ್ತು ನಷ್ಟ

07:58 PM Apr 19, 2022 | Team Udayavani |

ಕಲಬುರಗಿ :  ಜಿಲ್ಲೆಯ ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣ ಮುಖ್ಯ ರಸ್ತೆಯಲ್ಲಿರುವ ಕಿರಾಣಿ ಅಂಗಡಿಯೊಂದಕ್ಕೆ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಕಿರಾಣಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ.

Advertisement

ಪಟ್ಟಣದ ನಿವಾಸಿ ಅಮ್ಜದ್ ತಜಮುಲ್ ಇನಾಮದಾರ್ ಇವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಕಿರಾಣಿಯಂಗಡಿಯಲ್ಲಿ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವ ಘಟನೆಯನ್ನು ರಸ್ತೆಯಲ್ಲಿ ತಿರುಗಾಡುತ್ತ ಜನರು ನೋಡಿದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ .

ಕೆಲವರು ಶಟರ್ ಮುರಿದು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಸಹ ಬೆಂಕಿ ಹತೋಟಿಗೆ ಬಾರದೆ ಇದ್ದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿಯಿಂದ ಸುಟ್ಟುಹೋದ ಆಹಾರ ಧಾನ್ಯಗಳ ರಕ್ಷಣೆ ಮಾಡುವ ಪ್ರಯತ್ನ ನಡೆಸಲು ಕೂಡ ಆಗಲೇ ಸುಟ್ಟು ಕರಕಲಾಗಿದ್ದವು.

ಕಿರಾಣಿ ಅಂಗಡಿಯಲ್ಲಿ ಅಕ್ಕಿ ಜೋಳ ಗೋಧಿ ಹಿಟ್ಟು ಎಣ್ಣೆ ಇನ್ನಿತರ ದಿನಸಿ ಪದಾರ್ಥಗಳು ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿವೆ ಎಂದು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಇದನ್ನೂ ಓದಿ : ಯೋಜನೆಗಳನ್ನು ರೂಪಿಸುವಲ್ಲಿ ಮೈಸೂರು ಜಿಲ್ಲಾ ಒಕ್ಕೂಟ ಮಾದರಿಯಾಗಿದೆ: ಎಸ್.ಟಿ.ಸೋಮಶೇಖರ್

Advertisement

ಬೆಂಕಿಯಿಂದ ಬೆಂಕಿಯಿಂದ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎಂದು ಹಾನಿಗೊಳಾದ ಸಂತ್ರಸ್ತ ಅಮ್ಜದ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ 1ತಿಂಗಳಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಬೆಂಕಿಯಿಂದ ಸುಟ್ಟು ಹೋಗಿರುವ ಆಹಾರ ಪದಾರ್ಥ ನೋಡಿ ಬಹಳಷ್ಟು ದುಃಖಿತನಾಗಿದ್ದಾನೆ.ಸರ್ಕಾರ ಕೂಡಲೇ ತನಗೆ ಪರಿಹಾರ ನೀಡಬೇಕೆಂದು ಸಮಾಜ ಸೇವಕ ಅಬ್ದುಲ್ ಬಾಸೀದ್ ಕೆಎಂ ಭಾರಿ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next