Advertisement

Raichur: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಅಂಗಡಿ… ಲಕ್ಷಾಂತರ ರೂ. ನಷ್ಟ

02:02 PM May 27, 2024 | Team Udayavani |

ರಾಯಚೂರು: ನಗರದ ಮಹಾವೀರ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಗಿಗಾ ಬೈಟ್ ಎನ್ನುವ ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಹಾನಿಯಾಗಿದೆ.

Advertisement

ಘಟನೆಯಲ್ಲಿ ಮೂರು ಎಲೆಕ್ಟ್ರಿಕ್ ವಾಹನಗಳು, ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ. ಎರಡು ಅಂತಸ್ತಿನ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿಕೊಂಡಿದೆ. ಕಟ್ಟಡದೊಳಗೆ ಕಾರ್ಮಿಕರು ಸಿಲುಕಿಕೊಂಡಿದ್ದರು. ಶ್ರೀನಿವಾಸ ಎನ್ನುವ ಕಾರ್ಮಿಕ ಮೇಲಿನಿಂದ ಜಿಗಿದಿದ್ದು, ಕಾಲಿಗೆ ಪೆಟ್ಟಾಗಿದೆ. ಅಮೃತಾ ಎನ್ನುವ ಮಹಿಳೆ ಕೂಡ ತಪ್ಪಿಸಿಕೊಂಡಿದ್ದಾಳೆ. ವರುಣ ಎನ್ನುವವರಿಗೆ ಸೇರಿದ ಅಂಗಡಿ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಎರಡು ವಾಹನಗಳು ಬಂದು ಬೆಂಕಿ ನಂದಿಸಿದರು. ಬೆಂಕಿ ನಂದಿಸಲು ಕಿಟಗಿಯ ಗಾಜುಗಳನ್ನು ಒಡೆದರು. ಕಾರ್ಮಿಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮಹಾವೀರ ವೃತ್ತದಲ್ಲಿರುವ ಎಲ್ಲ ಅಂಗಡಿಗಳು ವರ್ತಕರು ಆತಂಕಗೊಂಡಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ರಹ್ಯಸವಾಗಿ 2ನೇ ಮದುವೆಯಾದ್ರಾ ಬಿಗ್‌ ಬಾಸ್‌ ಖ್ಯಾತಿಯ ಮುನಾವರ್?‌ ಫೋಟೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next