Advertisement

ಸುಪ್ರೀಂ ತೀರ್ಪಿನ ನಂತರ ಪಿಎಫ್ ದೂರು ಕಡಿಮೆ?

12:30 AM Mar 16, 2019 | |

ಕೋಲ್ಕತಾ: ಉದ್ಯೋಗಿಗಳಿಗೆ ಕಂಪನಿಗಳು ಒದಗಿಸುವ ವಿಶೇಷ ಭತ್ಯೆಗಳು ಕೂಡ ಮೂಲ ವೇತನದ ಭಾಗವಾಗಿವೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರದಲ್ಲಿ ಭವಿಷ್ಯ ನಿಧಿ ಇಲಾಖೆಗೆ ಬರುತ್ತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ತೀರ್ಪಿನಿಂದಾಗಿ ವೇತನದಲ್ಲಿ ಪಿಎಫ್ ಕಡಿತದ ಗೊಂದಲಗಳು ಕಡಿಮೆಯಾಗಿವೆ.

Advertisement

ಈಗಾಗಲೇ ಇರುವ ನಿಯಮವನ್ನೇ ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಕಂಪನಿಗಳು ವಿಧಿಸುವ ವಿಶೇಷ ಭತ್ಯೆಗಳೂ ಮೂಲ ವೇತನದ ಭಾಗವೇ ಆಗಿರುತ್ತದೆಯೇ ಎಂಬ ಬಗ್ಗೆ ಎಲ್ಲರಲ್ಲೂ ಗೊಂದಲವಿತ್ತು. ಆದರೆ ಕೋರ್ಟ್‌ ಇದನ್ನು ಸ್ಪಷ್ಟಪಡಿಸಿದ್ದು, ದೂರು ನೀಡುವವರ ಸಂಖ್ಯೆ ಕಡಿಮೆಯಾಗಲಿದೆ. ಇನ್ನೊಂದೆಡೆ ಉದ್ಯೋಗಿಯು ಕಂಪನಿ ಬದಲಿಸಿದಾಗ, ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಪಿಎಫ್ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಈ ವ್ಯವಸ್ಥೆಯನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸಲಾಗಿದ್ದು, ಈಗಿರುವಂತೆ ನೌಕ ರರು ಅರ್ಜಿ ಸಲ್ಲಿಸುವ ಹಾಗೂ ಅದನ್ನು ಇಪಿಎಫ್ಒ ಅಧಿಕಾರಿಗಳು ಅನುಮೋದಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next