ಮುಂಬೈ: ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಎರಡು ಮಹಡಿಯ ಕಟ್ಟಡದಲ್ಲಿ ಅಗ್ನಿ ಆಕ್ಮಸಿಕ ಸಂಭವಿಸಿ ಇಬ್ಬರು ಮಕ್ಕಳು ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ ಘಟನೆ ರವಿವಾರ (ಅ.06) ಮುಂಬೈ (Mumbai) ನಲ್ಲಿ ನಡೆದಿದೆ.
ಚೆಂಬೂರಿನ (Chembur) ಸಿದ್ಧಾರ್ಥ್ ಕಾಲೋನಿಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ನೆಲಮಹಡಿಯಲ್ಲಿರುವ ವಿದ್ಯುತ್ ವಸ್ತುಗಳ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಮೇಲಿನ ಮಹಡಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲಿಯಾದವರನ್ನು ಪಾರಿಸ್ ಗುಪ್ತಾ (7), ನರೇಂದ್ರ ಗುಪ್ತಾ (10), ಮಂಜು ಪ್ರೇಮ್ ಗುಪ್ತಾ (30), ಅನಿತಾ ಗುಪ್ತಾ (39), ಪ್ರೇಮ್ ಗುಪ್ತಾ (30), ವಿಧಿ ಗುಪ್ತಾ ಮತ್ತು ಗೀತಾ ಗುಪ್ತಾ ಎಂದು ಗುರುತಿಸಲಾಗಿದೆ.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.