Advertisement

ಶಾರ್ಟ್ ಸರ್ಕ್ಯೂಟ್: ಇಬ್ಬರು ಮಕ್ಕಳು ಸಾವು; ತಂದೆ ತಾಯಿ ಗಂಭೀರ

09:52 AM Oct 22, 2019 | keerthan |

ಬೆಂಗಳೂರು:  ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇಬ್ಬರು ಮಕ್ಕಳು ಮೃತಪಟ್ಟು ತಂದೆ ತಾಯಿ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಬೆಂಗಳೂರಿನ ಭಕ್ಷಿ ಗಾರ್ಡನ್ ನಲ್ಲಿ ನಡೆದಿದೆ.

Advertisement

ಕಾವೇರಿ ಮತ್ತು ಶ್ರೀಕಾಂತ ಮೃತಪಟ್ಟ ದುರ್ದೈವಿಗಳು. ತಂದೆ ಮುರಳಿ ಮತ್ತು ತಾಯಿ ಗೀತಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಬೆಳಗ್ಗಿನ ಜಾವ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next