Advertisement
ರಾಷ್ಟ್ರೀಯ ಹಸುರು ಪೀಠ(ಎನ್‌ಜಿ ಟಿ) ನಿರ್ದೇಶನದಂತೆ ರಾಜ್ಯದ ಕಡಲ ತೀರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೊದಲ ಬಾರಿ ವಿಸ್ತೃತ ಅಧ್ಯಯನ ನಡೆಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿರ್ಧರಿಸಿದೆ. ನ್ಯಾಶನಲ್ ಸೆಂಟರ್ ಫಾರ್ ಸಸ್ಟೈನಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್(ಎನ್‌ಸಿಎಸ್‌ಸಿಎಂ)ಗೆ ದೇಶದ ವಿವಿಧ ಕರಾವಳಿ ಭಾಗದ ಸಮಗ್ರ ವರದಿ ರೂಪಿಸಲು ಸೂಚಿಸಲಾಗಿದೆ. ಈ ಸಂಸ್ಥೆಯ ಪರಿಣಿತರು 3 ತಿಂಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
Related Articles
Advertisement
ಕೃತಕ ದಿಬ್ಬಗಳ ರಚನೆಗೆ ಒಲವು!ಸಮುದ್ರ ದಡದಿಂದ ನಿರ್ದಿಷ್ಟ ದೂರ ನೀರಿನಲ್ಲಿ ಮೀನುಗಳನ್ನು ಆಕರ್ಷಿಸುವ ಕೃತಕ ದಿಬ್ಬಗಳನ್ನು (ಫಿಶ್ ಅಗ್ರಿಗೇಟಿಂಗ್ ಡಿವೈಸ್) ನಿರ್ಮಿ ಸುವ ಯೋಜನೆಯನ್ನು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಸಮುದ್ರದ ನೀರಿನ ತೆರೆ ದಡ ತಲುಪುವ ಮೊದಲು ನಿರ್ದಿಷ್ಟ ಸ್ಥಳದಲ್ಲಿ ನೀರಿನ ಮಧ್ಯೆಯೇ ಹೊಡೆಯುತ್ತದೆ. ಇಂತಹ ವೇವ್ ಬ್ರೇಕಿಂಗ್ ಝೋನ್ ಗುರುತಿಸಿ ಇದಕ್ಕೂ ಸ್ವಲ್ಪ ಹಿಂದೆ ಫಿಶ್ ಅಗ್ರಿಗೇಟಿಂಗ್ ಡಿವೈಸ್ ಅಳವಡಿಸಿ ಕಡಲ ಅಲೆಗಳ ವೇಗ ದಡ ತಲುಪುವ ಮೊದಲೇ ಕಡಿಮೆಯಾಗಬಹುದು ಎನ್ನುವ ಲೆಕ್ಕಾಚಾರವಿದೆ. ಕಡಲ ತೀರಗಳಿಗೆ “ಕಲರ್ ಕೋಡಿಂಗ್’!
ಕಡಲ ತೀರಗಳಿಗೆ ಕಲರ್ ಕೋಡಿಂಗ್ ನೀಡಲಾಗಿದೆ. ಈ ಪೈಕಿ ಕಡಲಕ್ಕೊರೆತ ಅಧಿಕವಿರುವ ಪ್ರದೇಶಕ್ಕೆ “ರೆಡ್’ ನೀಡಿದ್ದರೆ, ಉಳ್ಳಾಲದ ಬಟ್ಟಪ್ಪಾಡಿ, ಸಸಿಹಿತ್ಲು ಬೀಚ್‌ಗಳು “ರೆಡ್’ ಪಟ್ಟಿಯಲ್ಲಿವೆ. ಉಡುಪಿಯ ಪಡುಬಿದ್ರಿ ಬಳಿಯ ನಡಿಪಟ್ಣ ಹಾಗೂ ಬೈಂದೂರಿನ ನದಿ-ಸಮುದ್ರ ಸೇರುವ ಪ್ರದೇಶಕ್ಕೂ ರೆಡ್ ನೀಡಲಾಗಿದೆ. ಕಡಲ್ಕೊರೆತ ಮಧ್ಯಮ ಪ್ರಮಾಣದಲ್ಲಿರುವಲ್ಲಿಗೆ “ಆರೆಂಜ್’, ಕಡಿಮೆ ಇರುವಲ್ಲಿಗೆ “ಎಲ್ಲೋ’, ಕಡಲ್ಕೊರೆತ ಆಗದ ಪ್ರದೇಶಕ್ಕೆ “ಗ್ರೀನ್’ ಕೋಡಿಂಗ್ ನೀಡಲಾಗುತ್ತದೆ. ಈ ಕಲರ್ ಕೋಡ್ ಆಧರಿಸಿಯೇ ಮುಂದಿನ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ. ತಜ್ಞರ ವರದಿ ಸಿದ್ಧವಾಗಿದೆ
ಎನ್‌ಸಿಎಸ್‌ಸಿಎಂ ತಂಡದ ತಜ್ಞರು ಈಗಾಗಲೇ ದಕ್ಷಿಣ ಕನ್ನಡ ಸಹಿತ ರಾಜ್ಯದ ವಿವಿಧ ಕಡಲ ತೀರಗಳಿಗೆ ಭೇಟಿ ನೀಡಿ ವರದಿ ಸಿದ್ದಪಡಿಸಿದ್ದಾರೆ. ಶೋರ್‌ಲೈನ್ ಮ್ಯಾನೇಜ್‌ಮೆಂಟ್ ಫ್ಲ್ಯಾನ್ ವರದಿ ಅನುಷ್ಠಾನಕ್ಕೆ ಬಂದ ಬಳಿಕ ಕಡಲ ಭಾಗದ ವಿವಿಧ ಚಟುವಟಿಕೆ ನಡೆಸಲು ಇದುವೇ ಮುಖ್ಯ ಆಧಾರವಾಗಲಿದೆ.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ. -ದಿನೇಶ್ ಇರಾ