Advertisement

ಸಂಪೂರ್ಣ ವಸ್ತ್ರ ಭೂಷಣ

10:35 PM Aug 02, 2019 | Team Udayavani |

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಪಿಂಗ್‌ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ. ಸಂಪೂರ್ಣ ಸಂಘದ ವತಿಯಿಂದ, “ವಸ್ತ್ರಭೂಷಣ’ ಕರಕುಶಲ ವಸ್ತುಗಳ ಪ್ರದರ್ಶನ ನಡೆಯುತ್ತಿದೆ. ಐದು ದಿನಗಳ ಈ ಮೇಳದಲ್ಲಿ, ವೈವಿಧ್ಯಮಯ ಕರಕುಶಲ ಸೀರೆಗಳು ಹಾಗೂ ವಸ್ತ್ರಗಳು, ಕೈಮಗ್ಗದ ಹಾಗೂ ಕರಕುಶಲ ವಸ್ತುಗಳು ಪ್ರದರ್ಶನಗೊಳ್ಳಲಿವೆ.

Advertisement

“ಪದ್ಮಶ್ರೀ’ ಸೀರೆ
ಒಡಿಶಾದ ಕೊಟಾ³ಡ್‌ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ವಿಜೇತ ಗೋವರ್ಧನ್‌ ಪಣಿಕಾ, ವಿನ್ಯಾಸಗೊಳಿಸಿರುವ ಕೊಟಾ³ಡ್‌ ನೇಯ್ಗೆಯ ಬಟ್ಟೆಗಳು ಮೇಳದಲ್ಲಿವೆ. ಸಾಂಪ್ರದಾಯಿಕ ಬುಡಕಟ್ಟು ವಿನ್ಯಾಸ ಹೊಂದಿರುವ ಪಣಿಕಾ ಅವರ ಉತ್ಪನ್ನಗಳು, ಶೇ.100ರಷ್ಟು ಹತ್ತಿ ಹಾಗೂ ನೈಸರ್ಗಿಕ ನೂಲುಗಳಿಂದ ತಯಾರಿಸಲ್ಪಟ್ಟಿವೆ.

ಏನೆಲ್ಲಾ ಸಿಗುತ್ತೆ?
ಒಡಿಶಾದ ಕೊಟಾಡ್‌ ನೇಯ್ಗೆ, ವಾರಾ­ಣಸಿಯ ನೇಯ್ಗೆ ಬಟ್ಟೆಗಳು, ರಾಜ­ಸ್ಥಾನದ ಅಜರಾಕ್‌, ಪಟೋಲಾ ಹಾಗೂ ಅಕೋಲ, ಚೆಟ್ಟಿನಾಡ್‌ ಕಾಟನ್‌, ಕಾಂಜೀ­ವರಂ ಹಾಗೂ ಬ್ಲಾಕ್‌ಪ್ರಿಂಟ್‌ ಸೀರೆಗಳು ಮೇಳದಲ್ಲಿ ಇರಲಿವೆ. ಅಷ್ಟೇ ಅಲ್ಲದೆ,ಪಾಟರ್‌ ಪಾಪ್‌ ಅಪ್‌ ಹಾಗೂ ಸ್ಟುಡಿಯೊ ಡಿಸೈನರ್‌ ಪಾಟರ್‌ಗಳು, ಪಿಂಗಾಣಿ ಬಟ್ಟಲುಗಳು, ಅಲಂಕಾರಿಕ ಪಾತ್ರೆಗಳು ಸಿಗುತ್ತವೆ.

ನಾಲ್ಕು ಕೃತಿಗಳ ಅನಾವರಣ
ತುಮಕೂರಿನ ಗೋಮಿನಿ ಪ್ರಕಾಶನದ ವತಿಯಿಂದ ನಾಲ್ಕು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ ಅವರ “ಮರೆತು ಹೋದ ಮೈಸೂರಿನ ಪುಟಗಳು’ (ಲೇಖನಗಳು), ವಿ. ಗೋಪಕುಮಾರ್‌ ಅವರ “ಎರಡು ಹನಿ ಮಳೆಯ ಮೋಡ’ (ನ್ಯಾನೊ ಕಥೆಗಳ ಸಂಕಲನ) ಹಾಗೂ ವಿಜಯೀಭವ ಗೆಲ್ಲಲು ಸಿದ್ಧರಾಗಿ (ವ್ಯಕ್ತಿತ್ವ ವಿಕಸನದ ಲೇಖನ), ಸದಾಶಿವ್‌ ಸೊರಟೂರು ಅವರ “ಲೈಫ್ನಲ್ಲಿ ಏನಿದೆ ಸಾರ್‌?’ (ವ್ಯಕ್ತಿತ್ವ ವಿಕಸನದ ಲೇಖನ)- ಬಿಡುಗಡೆಯಾಗುತ್ತಿರುವ ಪುಸ್ತಕಗಳು. ಲೇಖಕಿ ಪಿ. ಚಂದ್ರಿಕಾ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಎಲ್ಲಿ?: ಗಾಂಧಿ ಭವನ,
ಕುಮಾರ ಪಾರ್ಕ್‌ ಪೂರ್ವ
ಯಾವಾಗ?: ಆ.4, ಭಾನುವಾರ ಮಧ್ಯಾಹ್ನ 3.30

Advertisement

ಯಾವಾಗ?: ಆ. 3- ಆ. 6, ಬೆಳಗ್ಗೆ 11ರಿಂದ 7
ಎಲ್ಲಿ? ನಂ. 63, ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜು, ಕಂಟೋನ್ಮೆಂಟ್‌ ರೈಲು ನಿಲ್ದಾಣದ ಬಳಿ

Advertisement

Udayavani is now on Telegram. Click here to join our channel and stay updated with the latest news.

Next