Advertisement
ದಸರಾ ಹಬ್ಬವನ್ನು ಗ್ರಾಹಕರು ವೈಭವ ಹಾಗೂ ವಿಶೇಷವಾಗಿ ಆಚರಿಸಲು ಅಮೆಜಾನ್ ಇಂಡಿಯಾ ಅ.10 ರಿಂದ 15ರವರೆಗೆ ಅಬ್ ಪೂರಾ ಇಂಡಿಯಾ ಮನಾಯೆಗಾ ಟ್ಯಾಗ್‌ಲೈನ್‌ನಡಿ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಎಂಬ ಬಹು ದೊಡ್ಡ ಆನ್‌ಲೈನ್ ಶಾಪಿಂಗ್ ಉತ್ಸವದ ಆಚರಣೆಯನ್ನು ಘೋಷಿಸಿದೆ.
Related Articles
ಗ್ರಾಹಕರಿಗೆ ಅನುಕೂಲವಾಗುವ ಸುರಕ್ಷಿತ ರೀತಿಯಲ್ಲಿ ಎಲೆಕ್ಟ್ರಾನಿಕ್ ಪಾವತಿಗಳು, ನಗದು ವಿತರಣೆ, ಅಮೆಜಾನ್ ಪೇ ಇಎಂಐ, ನೋ-ಕಾಸ್ಟ್ ಇಎಂಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಹಾಗೂ ಬಜಾಜ್ ಫಿನ್‌ಸರ್ವ್ ಕಾರ್ಡ್‌ಗಳಲ್ಲಿ ಖರೀದಿಸುವ ಸರಳ ಹಾಗೂ ಸುರಕ್ಷಿತ ಹಣಕಾಸು ಆಯ್ಕೆಗಳನ್ನು ಚಾಲ್ತಿಗೆ ತಂದಿದೆ.
Advertisement
ಗ್ರಾಹಕರು ಈ ಕ್ಯಾಷ್‌ಲೆಸ್ ಪದ್ಧತಿ ಅನುಸರಿಸಿದಲ್ಲಿ ಹಾಗೂ ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದ್ದಲ್ಲಿ ಶೇ.10 ರಷ್ಟು ತ್ವರಿತ ರಿಯಾಯಿತಿ ಮೂಲಕ ಹಣ ಉಳಿಸಬಹುದು. ಅಮೆಜಾನ್ ಪೇ ಮೂಲಕ ಪಾವತಿಸಿದಲ್ಲಿ 300 ರೂ. ಪೇ ಬ್ಯಾಕ್ ಬ್ಯಾಲೆನ್ಸ್ ಸಹ ಪಡೆಯಬಹುದು.
ಅಮೆಜಾನ್ ಫೈನಾನ್ಸಿಂಗ್ ಸೌಲಭ್ಯ: ಅಮೆಜಾನ್ ಪೇ ಇಎಂಐ: ಕಾರ್ಡ್‌ಲೆಸ್ ವ್ಯವಹಾರವಾಗಿದ್ದು 3 ರಿಂದ 6 ತಿಂಗಳ ಸಾಲ (ಇಎಂಐ) ದೊರೆಯಲಿದೆ. ಅಮೆಜಾನ್ ಗ್ರಾಹಕರಿಗೆ ಇದು ಅನ್ವಯವಾಗಲಿದೆ. ಡೆಬಿಟ್ ಕಾರ್ಡ್ ಇಎಂಐ: ಹೆಚ್‌ಡಿಎಫ್‌ಸಿ, ಆ್ಯಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ದಾರರಿಗೂ ಇಎಂಐ ಸೌಲಭ್ಯ ಕಲ್ಪಿಸಿದೆ. ನೋ ಕಾಸ್ಟ್ ಇಎಂಐ: ಬಜಾಜ್ ಫೈನಾನ್ಸ್ ಕಾರ್ಡ್‌ದಾರಿಗೆ ನೋ ಕಾಸ್ಟ್ ಇಎಂಐ ದೊರೆಯಲಿದೆ. ಇನ್‌ಸ್ಟೆಂಟ್ ಬ್ಯಾಂಕ್ ಡಿಸ್ಕೌಂಟ್: ಇತೀ¤ಚೆಗೆ ಚಾಲ್ತಿಗೆ ತಂದ ಪದ್ಧತಿ ಇದು. ಇತರ ಬ್ಯಾಂಕುಗಳು ಪಾವತಿ ಸಂದರ್ಭದಲ್ಲಿ ರಿಯಾಯಿತಿ ದೊರೆಯಲಿದೆ. ಈ ಸೀಸನ್‌ನಲ್ಲಿ ಬಳಕೆಗೆ ಮಾತ್ರ. ಎಕ್ಸ್‌ಚೇಂಜ್: ದೇಶದ 100 ನಗರಗಳು ಮತ್ತು ಪೌರಾಡಳಿತ ಪ್ರದೇಶಗಳ ಗ್ರಾಹಕರು ವಸ್ತುಗಳ ಎಕ್ಸ್‌ಚೇಂಜ್ ಅನ್ನು ಮಾಡಿಕೊಳ್ಳುವ ಅವಕಾಶ.