Advertisement

Lucknow: ಹಲವೆಡೆ 2,000 ರೂ. ನೋಟು ಸ್ವೀಕರಿಸಲು ನಕಾರ, ಚಿನ್ನ ಖರೀದಿಸಲು ಆಸಕ್ತಿ!

11:45 AM May 22, 2023 | |

ಲಕ್ನೋ: 2000 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಸೆಪ್ಟೆಂಬರ್‌ 30ರವರೆಗೆ 2,000 ಸಾವಿರ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿದೆ. ಆದರೆ ಮತ್ತೊಂದೆಡೆ 2,000 ಸಾವಿರ ರೂ. ನೋಟುಗಳನ್ನು ಸ್ವೀಕರಿಸಲು ನಿರಾಕರಿಸುತ್ತಿರುವ ಘಟನೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಹುಟ್ಟುಹಬ್ಬದಂದೇ ಹೃದಯಾಘಾತದಿಂದ ಮಗ ಮೃತ್ಯು: ಮೃತದೇಹದ ಕೈಹಿಡಿದು ಕೇಕ್‌ ಕತ್ತರಿಸಿದ ಪೋಷಕರು!

ಉತ್ತರಪ್ರದೇಶದ ಲಕ್ನೋದಲ್ಲಿ ಎಲ್ಲಾ ಮಧ್ಯಮ ಮತ್ತು ಚಿಲ್ಲರೆ ವ್ಯಾಪಾರಿಗಳು, 2000 ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸುವುದಿಲ್ಲ ಎಂಬ ಕಾರಣ ನೀಡಿ, 2000 ಸಾವಿರ ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿರುವುದಾಗಿ ವರದಿ ವಿವರಿಸಿದೆ.

ಮಲ್ಟಿ ಬ್ರ್ಯಾಂಡ್‌ ಶೋರೂಂಗಳಲ್ಲಿ ಮಾತ್ರ 2,000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿದ್ದಾರೆ. 2,000 ರೂ. ಮುಖಬೆಲೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರು ಮುಂದಾಗಿದ್ದು, ಈ ಕಾರಣದಿಂದ ನಾವು ಕೂಡಾ ಜಾಗೃತರಾಗಿದ್ದೇವೆ. ಅಷ್ಟೇ ಅಲ್ಲ 2,000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲು ಬಯಸುತ್ತಿಲ್ಲ ಎಂದು ಹಜರತ್‌ ಗಂಜ್‌ ನ ಪ್ರಮುಖ ಕಿರಾಣಿ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ ಜ್ಯುವೆಲ್ಲರಿ ಹಾಗೂ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರಾಟದ ಅಂಗಡಿಗಳು 2,000 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲು ಹೆಚ್ಚಿನ ಆದ್ಯತೆ ನೀಡಿದ್ದರು. ಇದರಿಂದಾಗಿ ಕಾನ್ಪುರ್‌ ಮತ್ತು ಪ್ರಯಾಗ್‌ ರಾಜ್‌ ನಲ್ಲಿ ಹೆಚ್ಚಿನ ಜನರು ಜ್ಯುವೆಲ್ಲರಿ ಶಾಪ್‌ ಗೆ ಆಗಮಿಸುವ ಮೂಲಕ ಭರ್ಜರಿ ವಹಿವಾಟು ನಡೆದಿತ್ತು.

Advertisement

ಇದು ಮದುವೆ ಸಮಾರಂಭದ ಸೀಸನ್‌ ಆಗಿದ್ದರಿಂದ ಜನರು ಕೂಡಾ 2,000 ರೂ. ಮುಖಬೆಲೆಯ ನೋಟುಗಳನ್ನು ಚಿನ್ನ ಖರೀದಿಸುವ ಮೂಲಕ ಬಳಕೆ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅದೇ ರೀತಿ ನಮ್ಮ ಕೆಲವು ಗೆಳೆಯರು 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ ಗಳಲ್ಲಿ ಠೇವಣಿ ಮಾಡಿದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಟ್ರ್ಯಾಪ್‌ ಮಾಡಬಹುದು ಎಂಬ ಭಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಯಾಗ್‌ ರಾಜ್‌ ನ ಜ್ಯುವೆಲ್ಲರಿ ಅಂಗಡಿ ಮಾಲೀಕ ರಾಹುಲ್‌ ರಸ್ತೋಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next