Advertisement
ಏನಿದು ತಂತ್ರಜ್ಞಾನಾಧಾರಿತ ಕಾರ್ಟ್?ಮೊದಲಾದರೆ ನೀವು ಶಾಪಿಂಗ್‌ಗೆಂದು ಮಾಲ್‌ಗೆ ಹೋದಾಗ ಅಲ್ಲಿ ಇರುವ ಕಾರ್ಟ್‌ಗಳಲ್ಲಿ ನಿಮಗೆ ಅಗತ್ಯವಿರುವ ವಸ್ತುಗಳನ್ನು ಹಾಕಿ, ಅನಂತರ ಅದನ್ನು ಬಿಲ್ ಕೌಂಟರ್‌ನಲ್ಲಿ ಒಂದೊಂದಾಗಿ ನಮೂದಿಸಿ ಅವರು ನೀಡುವ ರಶೀದಿಗೆ ತಕ್ಕಷ್ಟು ಬಿಲ್ ಪಾವತಿಸಬೇಕಿತ್ತು. ಇಲ್ಲಿ ತುಂಬಾ ಮಂದಿ ಇದ್ದರೆ ನೀವು ಸ್ವಲ್ಪ ಹೊತ್ತು ಸರದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ತಂತ್ರಜ್ಞಾನಾಧಾರಿತ ಕಾರ್ಟ್‌ನಲ್ಲಿ ಹಾಗಲ್ಲ. ನೀವು ವಸ್ತುಗಳನ್ನು ಅದಕ್ಕೆ ಹಾಕುವ ಮುನ್ನವೇ ಆ ವಸ್ತುವಿನ ಬೆಲೆ ನಮೂದಿಸಲ್ಪಡುತ್ತದೆ. ನಿಮಗೆ ಮತ್ತೆ ಬಿಲ್ ಕೌಂಟರ್‌ನಲ್ಲಿ ಸಾಲಲ್ಲಿ ನಿಲ್ಲುವ ಸ್ಥಿತಿ ಇರುವುದಿಲ್ಲ. ನೀವು ಮಾಲ್‌ನಿಂದ ಹೊರಹೋಗುವ ಮುನ್ನ ಬಿಲ್ ಪಾವತಿಸಿದರೆ ಆಯಿತು.
ಈ ಕಾರ್ಟ್‌ನಲ್ಲಿ ಸ್ಮಾರ್ಟ್ ಆ್ಯಪ್ ಗಳಿವೆ. ಇದರಿಂದ ಎಲ್ಲ ಖರೀದಿಸಬೇಕೆಂದಿರುವ, ಖರೀದಿಯಾದ ವಸ್ತುಗಳ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವುದನ್ನು ಖರೀದಿಸಿದಿರಿ ಎನ್ನುವುದನ್ನು ತಿಳಿಯಲು ಸ್ವಯಂ ಚಾಲಿತ ಕೆಮರಾಗಳನ್ನು ಇದಕ್ಕೆ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಸೆನ್ಸಾರ್ ಅನ್ನು ಹೊಂದಿದ್ದು, ಗ್ರಾಹಕರು ಖರೀದಿ ಬಳಿಕ ಹಸಿರು ದೀಪದೊಂದಿಗೆ ಎಲ್ಲವೂ ಸರಿಯಿದೆ, ರೆಡ್ ಲೈಟ್ ಉರಿದರೆ ಮತ್ತೂಮ್ಮೆ ಪರಿಶೀಲಿಸಿ ಎಂಬುದನ್ನು ಸೂಚಿಸುವ ಸಾಮರ್ಥ್ಯವನ್ನು ಹೊಂದಿದೆ.