Advertisement

Thirthahalli: ಜಾಗ ಒತ್ತುವರಿ ಮಾಡಿಕೊಂಡವರನ್ನು ಮುಲಾಜಿಲ್ಲದೆ ತೆರವುಗೊಳಿಸಿ: ಶಾಸಕ ಆರಗ

12:48 PM Aug 26, 2023 | Team Udayavani |

ತೀರ್ಥಹಳ್ಳಿ : ಪಟ್ಟಣಕ್ಕೆ ಗ್ರಾಮೀಣ ಭಾಗದಿಂದ ಬರುವವರಿಗೆ ಪಾರ್ಕಿಂಗ್ ಮಾಡಲಿಕ್ಕೆ ಸ್ಥಳವೇ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ಫುಟ್ ಪಾತ್ ಗಳನ್ನು, ಖಾಲಿ ಜಾಗಗಳನ್ನು ಒತ್ತುವರಿ ಮಾಡಿ ಹೂವು-ಹಣ್ಣು, ಮೀನು ಇನ್ನಿತರೆ ಸಾಮಾಗ್ರಿ ಮಾರಾಟ ಮಾಡಲಾಗುತ್ತಿದೆ. ಕಂಡ ಕಂಡಲ್ಲಿ ಫಾಸ್ಟ್‌ಫುಡ್ ಅಂಗಡಿ ತೆರೆಯಲಾಗುತ್ತಿದೆ. ಇದು ಸರಿಯಲ್ಲ. ನಿರ್ದಿಷ್ಟ ಸಮಯದಲ್ಲಿ ತಳ್ಳು ಗಾಡಿ ತಂದು ವ್ಯಾಪಾರ ಮಾಡಿಕೊಂಡು ವಾಪಾಸ್ ಹೋದರೆ ಸಮಸ್ಯೆ ಇಲ್ಲ. ಅದು ಬಿಟ್ಟು ಅವ್ಯವಸ್ಥೆ ಸೃಷ್ಟಿಯಾಗುವ ಹಾಗೆ ಓಡಾಡುವ ಜಾಗ ಒತ್ತುವರಿ ಮಾಡಿ ಅಂಗಡಿ ಹಾಕಲು ಬಿಡಬೇಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪಟ್ಟಣ ಪಂಚಾಯತ್ ನ ಸಭಾಂಗಣದಲ್ಲಿ ಪಟ್ಟಣದ ಫುಟ್‌ಪಾತ್ ಅತಿಕ್ರಮಣ, ಅನಧಿಕೃತ ಕಟ್ಟಡಗಳ ನಿರ್ಮಾಣ, ಪಾರ್ಕಿಂಗ್ ಸಮಸ್ಯೆ, ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ರಸ್ತೆ ಬದಿಯ ಗ್ರಿಲ್‌ಗಳಿಂದ ವ್ಯಾಪಾರಸ್ಥರಿಗಾಗುತ್ತಿರುವ ತೊಂದರೆ, ಪಟ್ಟಣದ ಅಭಿವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆಯ ಸಭೆಯಲ್ಲಿ ಮಾತನಾಡಿ ಯಾರೇ ಒತ್ತುವರಿ ಮಾಡಲಿ ಆ ಜಾತಿ- ಈ ಜಾತಿ, ಆ ಪಕ್ಷ- ಈ ಪಕ್ಷ, ಬಡವ-ಶ್ರೀಮಂತ ಎಂದು ನೋಡದೆ ಒತ್ತುವರಿ ಖುಲ್ಲಾ ಮಾಡಿ, ನಾನು ಈ ವಿಚಾರದಲ್ಲಿ ಯಾರಿಗೂ ಪ್ರೋತ್ಸಾಹಿಸುವುದಿಲ್ಲ. ಒಂದು ಸುತ್ತಿನ ಸೂಚನೆ ಕೊಟ್ಟು ಒತ್ತುವರಿ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪ. ಪಂ ಅಧ್ಯಕ್ಷೆ ಸುಶೀಲ ಶೆಟ್ಟಿ ಮಾತನಾಡಿ ಈಗಾಗಲೇ ಹಲವು ಬಾರಿ ಬೀದಿ ಬದಿ ವ್ಯಾಪಾರಿಗಳಿಗೆ ತಿಳಿಸಿದ್ದೇವೆ. ಅವರ ಕೆಲಸಕ್ಕೆ ನಾವು ತೊಡಕು ಮಾಡುವುದಿಲ್ಲ. ಮದ್ಯಾನ್ಹ 3 ಗಂಟೆಯಿಂದ 10 ಗಂಟೆಯವರೆಗೂ ಅವರು ತಮ್ಮ ವಾಹನದಲ್ಲಿ ಕೆಲಸ ಮಾಡಬಹುದು ಆದರೆ ಎಲ್ಲಿಯೂ ಟೆಂಟ್ ಹಾಕುವ ಹಾಗಿಲ್ಲ. ಹಾಗೂ ಅಲ್ಲೇ ಗಾಡಿಗಳನ್ನು ನಿಲ್ಲಿಸುವ ಹಾಗಿಲ್ಲ ವ್ಯಾಪಾರ ಮಾಡಿಕೊಂಡು ಗಾಡಿಗಳನ್ನು ತೆಗೆದುಕೊಂಡು ಹೋಗಬೇಕು ಎಂದರು.

ಈ ಸಂದರ್ಭದಲ್ಲಿ ಪ. ಪ. ಉಪಾಧ್ಯಕ್ಷರಾದ ರೆಹಮಾತುಲ್ಲ ಅಸಾದಿ, ಮುಖ್ಯಾಧಿಕಾರಿ ಕುರಿಯಕೋಸ್, ಡಿವೈಎಸ್ ಪಿ ಗಜಾನನ ವಾಮನ ಸುತಾರ ಸೇರಿ ಪ. ಪಂ ಎಲ್ಲಾ ಸದಸ್ಯರು ಇದ್ದರು.

ಇದನ್ನೂ ಓದಿ: Shivaram Hebbar: ಸಿಎಂ ಹೆಬ್ಬಾರ್ ಭೇಟಿ… ಕೇವಲ ಮನವಿಗಷ್ಟೇ ಸೀಮಿತವಾಯ್ತಾ ಭೇಟಿ?

Advertisement
Advertisement

Udayavani is now on Telegram. Click here to join our channel and stay updated with the latest news.

Next