Advertisement

ಸುಳ್ಯದಲ್ಲಿ ನಡೆದ ಶೂಟೌಟ್‌ ಪ್ರಕರಣ : ಶಂಕಿತ ಆರೋಪಿಗಳು ಪೊಲೀಸ್‌ ವಶ?

11:11 PM Jun 08, 2022 | Team Udayavani |

ಸುಳ್ಯ: ಸುಳ್ಯದಲ್ಲಿ ರವಿವಾರ ನಡೆದಿದ್ದ ಶೂಟೌಟ್‌ ಪ್ರಕರಣದ ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಳ್ಯದ ಜಯನಗರದ ಮಹಮ್ಮದ್‌ ಶಾಹಿ ತನ್ನ ಕಾರಿನ ಬಳಿ ಇದ್ದ ಸಂದರ್ಭ ಅಪರಿಚಿತರ ತಂಡ ಸ್ಕಾರ್ಪಿಯೋದಲ್ಲಿ ಬಂದು ಗುಂಡು ಹೊಡೆದಿದ್ದರು. ಅದು ಕಾರಿಗೆ ತಾಗಿ ಯುವಕ ಅಪಾಯದಿಂದ ಪಾರಾಗಿದ್ದರು.

Advertisement

ತನಿಖೆಯನ್ನು ಪೊಲೀಸರು ವಿವಿಧ ಆಯಾಮಗಳನ್ನು ನಡೆಸುತ್ತಿದ್ದಾರೆ. ಸುಳ್ಯ ಸಮೀಪದಲ್ಲಿ ಹಿಂದೆ ನಡೆದಿದ್ದ ಪ್ರಮುಖ ವ್ಯಕ್ತಿಯೊಬ್ಬರ ಕೊಲೆ ಆರೋಪಿಗಳು ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಆದರೆ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇದನ್ನೂ ಓದಿ : ಹೋಂ ವರ್ಕ್‌ ಮಾಡಲಿಲ್ಲ ಎಂದು ಮಗಳ ಕೈ ಕಾಲು ಕಟ್ಟಿ ಸುಡು ಬಿಸಿಲಲ್ಲಿ ಮಲಗಿಸಿದ ತಾಯಿ!

Advertisement

Udayavani is now on Telegram. Click here to join our channel and stay updated with the latest news.

Next