Advertisement

ಶೂಟಿಂಗ್‌: ಒಲಿಂಪಿಕ್‌ ಕೋಟಾ ವಾಪಸ್‌

10:28 PM Mar 27, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನಿ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ “ವಿಶ್ವಕಪ್‌ ಶೂಟಿಂಗ್‌’ ಸ್ಪರ್ಧೆಯ 2 ಒಲಿಂಪಿಕ್‌ ಕೋಟಾಗಳನ್ನು ಹಿಂದೆ ಪಡೆಯಲಾಗಿದೆ. 25 ಮೀ. ಏರ್‌ ಪಿಸ್ತೂಲ್‌ ಮತ್ತು 25 ಮೀ. ರ್ಯಾಪಿಡ್‌ ಫೈರ್‌ ವಿಭಾಗದಲ್ಲಿ ಈ ಕೋಟಾಗಳನ್ನು ಅಳವಡಿಸಲಾಗಿತ್ತು.

Advertisement

ಈ ಕೋಟಾಗಳನ್ನು ಮುಂದಿನ ಬೀಜಿಂಗ್‌ ವರ್ಲ್ಡ್ ಕಪ್‌ (ಎ. 21-18) ಮತ್ತು ಮ್ಯೂನಿಚ್‌ ಕೂಟದಲ್ಲಿ (ಮೇ 24ರಿಂದ 31) ನೀಡಲು ಅಂತಾರಾಷ್ಟ್ರೀಯ ಶೂಟಿಂಗ್‌ ನ್ಪೋರ್ಟ್‌ ಫೆಡರೇಶನ್‌ ನಿರ್ಧರಿಸಿದೆ.

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಹೊಸದಿಲ್ಲಿ ಕೂಟದಲ್ಲಿ ಪಾಲ್ಗೊಳ್ಳಬೇಕಿದ್ದ ಪಾಕಿಸ್ಥಾನದ ಶೂಟರ್‌ಗಳಾದ ಜಿ.ಎಂ. ಬಶೀರ್‌ ಮತ್ತು ಖಲೀಲ್‌ ಅಹ್ಮದ್‌ ಅವರಿಗೆ ಭಾರತ ವೀಸಾ ನೀಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next