ಯುವ ನಿರ್ದೇಶಕ ಹ್ಯಾರಿಸ್ ಕೊಣಾಜೆಕಲ್ಲು ನಿಧನದಿಂದಾಗಿ ಸ್ಥಗಿತಗೊಂಡಿದ್ದ “ಆಟಿಡೊಂಜಿ ದಿನ’ ಸಿನೆಮಾ ಸದ್ಯ ಶೂಟಿಂಗ್ ಪೂರ್ಣಗೊಳಿಸಿದೆ. “ದಗಲ್‌ಬಾಜಿಲು’ ನಿರ್ದೇಶಕ ಪ್ರಶಾಂತ್ ಸಹಕಾರದಲ್ಲಿ ಶೂಟಿಂಗ್ ಮುಗಿದಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಹ್ಯಾರಿಸ್ ಅವರೇ ಬರೆದಿದ್ದರು. ಶೇ.75ರಷ್ಟು ಶೂಟಿಂಗ್ ಆಗಿದ್ದ ವೇಳೆ ಅಪಘಾತದಲ್ಲಿ ಹ್ಯಾರಿಸ್ ಮೃತಪಟ್ಟಿದ್ದರು. ಹೀಗಾಗಿ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಕೆಲವೊಂದು ದೃಶ್ಯ, ಫೈಟ್ ಹಾಗೂ ಹಾಡಿನ ಶೂಟಿಂಗ್ ಬಾಕಿ ಇತ್ತು. ಸದ್ಯ ಅದನ್ನೆಲ್ಲ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಸದ್ಯ ನಡೆಯುತ್ತಿದೆ. ಪೃಥ್ವಿ ಅಂಬರ್, ನಿರೀಕ್ಷಾ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ, ಸೂರಜ್ ಸಾಲ್ಯಾನ್ ಮೊದಲಾದವರು ಬಣ್ಣಹಚ್ಚಿದ್ದಾರೆ.
- ದಿನೇಶ್ ಇರಾ