Advertisement

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

10:16 PM Jul 27, 2021 | Team Udayavani |

ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಶೂಟರ್‌ಗಳ ಗುರಿ ಮತ್ತೆ ಮತ್ತೆ ತಪ್ಪುತ್ತಿದೆ.

Advertisement

ಮಂಗಳವಾರ ನಡೆದ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಪಾಲ್ಗೊಂಡಿದ್ದ ಮನು ಭಾಕರ್‌ ಹಾಗೂ ಸೌರಭ್‌ ಚೌಧರಿ ನೀರಸ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದರು.

ಕ್ವಾಲಿಫಿಕೇಶನ್‌-2 ಸ್ಪರ್ಧೆಯಲ್ಲಿ ಭಾರತದ ಜೋಡಿ 7ನೇ ಸ್ಥಾನಕ್ಕೆ ಕುಸಿಯಿತು. ಮೊದಲ ಸುತ್ತಿನಲ್ಲಿ ಇವರು 582 ಅಂಕಗಳನ್ನು ಕಲೆಹಾಕಿ ಭರವಸೆ ಮೂಡಿಸಿದ್ದರು. ಆದರೆ ದ್ವಿತೀಯ ಸುತ್ತಿನಲ್ಲಿ 380 ಅಂಕಗಳನ್ನು ಗಳಿಸಿ ನಿರಾಶೆ ಮೂಡಿಸಿದರು.

ಮಿಶ್ರ ತಂಡ ವಿಭಾಗದ ಇನ್ನೊಂದು ಜೋಡಿಯಾದ ಅಭಿಷೇಕ್‌ ವರ್ಮ-ಯಶಸ್ವಿನಿ ದೇಸ್ವಾಲ್‌ ಕೂಡ ಸೋತು ಹೊರಬಿದ್ದಿದ್ದಾರೆ. ಇವರಿಗೆ 17ನೇ ಸ್ಥಾನ ಲಭಿಸಿತು. 10 ಮೀ. ಮಿಶ್ರ ರೈಫ‌ಲ್‌ ವಿಭಾಗದಲ್ಲಿ ಅಂಜುಮ್‌ ಮೌದ್ಗಿಲ್‌-ದೀಪಕ್‌ ಕುಮಾರ್‌ ಹಾಗೂ ಇಳಾವೆನಿಲ್‌ ವಲರಿವನ್‌-ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಜೋಡಿಯೂ ಕಳಪೆ ಪ್ರದರ್ಶನ ತೋರಿತು.

Advertisement

Udayavani is now on Telegram. Click here to join our channel and stay updated with the latest news.

Next