Advertisement

ಶೂಟಿಂಗ್‌ ಕೋಚ್‌ಗೆ ಕೋವಿಡ್ 19 ; ಮುಂದುವರಿಯಲಿದೆ ತರಬೇತಿ

12:45 AM Jul 31, 2020 | Hari Prasad |

ಹೊಸದಿಲ್ಲಿ: ಇಲ್ಲಿನ ಡಾ| ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ತರಬೇತಿ ನೀಡುತ್ತಿದ್ದ ವನಿತಾ ಶೂಟಿಂಗ್‌ ಕೋಚ್‌ ಒಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ.

Advertisement

ಆದರೆ ಇಲ್ಲಿನ ಒಲಿಂಪಿಕ್‌ ಕೋರ್‌ ಗ್ರೂಪ್‌ ಶೂಟರ್‌ಗಳ ತರಬೇತಿ ಆ. ಒಂದರಿಂದ ಎಂದಿನಂತೆ ಮುಂದುವರಿಯಲಿದೆ ಎಂದು ಸಾಯ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಕೋವಿಡ್ 19 ಸೋಂಕಿಗೆ ಒಳಗಾಗಿರುವ ವನಿತಾ ಕೋಚ್‌ ಕೊನೆಯ ಸಲ ಜು. 24ರಂದು ಸಾಯ್‌ ಕೇಂದ್ರದ ಆಡಳಿತ ವಿಭಾಗದ ಕಚೇರಿಗೆ ಭೇಟಿ ನೀಡಿದ್ದರು.

ಆಗ ಯಾವುದೇ ತರಬೇತಿ ಕೇಂದ್ರಕ್ಕೆ ತೆರಳಿರಲಿಲ್ಲ, ಶೂಟರ್‌ಗಳನ್ನೂ ಸಂಪರ್ಕಿಸಿರಲಿಲ್ಲ. ಹೀಗಾಗಿ ಇವರ ಅಭ್ಯಾಸಕ್ಕೇನೂ ಅಡ್ಡಿ ಇಲ್ಲ ಎಂದು ಸಾಯ್‌ ಹೇಳಿದೆ.

ಜು. 8ರಿಂದ ತೆರೆಯಲ್ಪಟ್ಟ ಈ ಶೂಟಿಂಗ್‌ ರೇಂಜ್‌ನಲ್ಲಿ ಒಟ್ಟು 34 ಮಂದಿ ಶೂಟರ್ ತರಬೇತಿ ಪಡೆಯುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next