ರಷ್ಯಾ : ಶನಿವಾರ ರಾತ್ರಿ ಪಶ್ಚಿಮ ರಷ್ಯಾದಲ್ಲಿ ಸೇನಾ ತರಬೇತಿ ಕೇಂದ್ರದಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಕನಿಷ್ಠ 1೧ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿಯ ಪ್ರಕಾರ, ಇಬ್ಬರು ದಾಳಿಕೋರರು ರಷ್ಯಾದ ಮಿಲಿಟರಿ ಪ್ರದೇಶವನ್ನು ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ.
ಈ ಘಟನೆ ಪಶ್ಚಿಮ ರಷ್ಯಾದ ಮಿಲಿಟರಿ ಸೈಟ್ ಬಳಿ ನಡೆದಿದ್ದು. ಈ ಗುಂಡಿನ ದಾಳಿಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಂದೂಕುಧಾರಿಗಳು ಉಕ್ರೇನ್‌ನಲ್ಲಿ ಹೋರಾಡಲು ಸಿದ್ಧರಾಗಿದ್ದ ಸೇವಾ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಬೆಲ್ಗೊರೊಡ್‌ನಿಂದ ಪೂರ್ವಕ್ಕೆ 105 ಕಿಲೋಮೀಟರ್ ದೂರದಲ್ಲಿರುವ ಉಕ್ರೇನಿಯನ್ ಗಡಿಯ ಸಮೀಪವಿರುವ ಸೊಲೊಟಿಯಲ್ಲಿನ ತರಬೇತಿ ಸ್ಥಳದಲ್ಲಿ ಫೈರಿಂಗ್ ವರದಿಯಾಗಿದೆ. ಇಬ್ಬರು ಉಗ್ರರು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ದಾಳಿಯಿಂದ 13 ಜನರು ಸಾವನ್ನಪ್ಪಿದ್ದು ಮತ್ತು 15 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರರಿಬ್ಬರೂ ಹತರಾಗಿದ್ದಾರೆ. ಅವರು ಸಿಐಎಸ್ ದೇಶದ ಪ್ರಜೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಸಿಐಎಸ್ ದೇಶಗಳು ರಶಿಯಾ, ತಜಕಿಸ್ತಾನ್, ಕಝಾಕಿಸ್ತಾನ್, ಬೆಲಾರಸ್ ಮತ್ತು ಇತರವುಗಳನ್ನು ಒಳಗೊಂಡಿವೆ.
ಇದನ್ನೂ ಓದಿ : ಸುರತ್ಕಲ್ : ಟೋಲ್ ಗೇಟ್ ಹೋರಾಟಗಾರರ ಮೇಲೆ ಪೊಲೀಸ್ ಬಲ ಪ್ರಯೋಗ ?