ಜಕಾರ್ತ:ಇಂಡೋನೇಶ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಮಂಗಳವಾರವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, ಪುರುಷರ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ 16 ವರ್ಷದ ಸೌರಭ್ ಚೌಧರಿ ಚಿನ್ನದ ಪದಕ ತಮ್ಮ ಕೊರಳಿಗೆ ಏರಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ. ಮತ್ತೊಬ್ಬ ಭಾರತೀಯ ಅಭಿಷೇಕ್ ವರ್ಮಾ ಏರ್ ಶೂಟಿಂಗ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಚೌಧರಿ ರೈತನ ಮಗ:
ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸೌರಭ ಉತ್ತರಪ್ರದೇಶ ಮೀರತ್ ನ ಹಳ್ಳಿ ಮೂಲದ ರೈತನ ಮಗ. 240.7 ಮೀಟರ್ ದೂರದವರೆಗೆ ಗುರಿ ಇಡುವ ಮೂಲಕ ಸೌರಭ್ ಚಿನ್ನದ ಪದಕ ಗೆದ್ದರೆ, ಜಪಾನ್ ನ 42 ವರ್ಷದ ಮಸೂಡಾ ಗುರಿ ತಪ್ಪುವ(239.7) ಮೂಲಕ ಬೆಳ್ಳಿ ಪದಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಗಿದೆ.