ಮಳೆಯಿಂದ ಪಾದಗಳನ್ನು ರಕ್ಷಿಸಿಕೊಳ್ಳಬೇಕು ಮತ್ತು ಉಳಿದವರಿಗಿತ ಬಿನ್ನವಾಗಿ ಕಾಣಬೇಕು ಎನ್ನುವವರಿಗೆ ಗಮ್‌ಬೂಟ್‌ಗಳು ಬೆಸ್ಟ್ ಚಾಯ್ಸ. ಹೆಚ್ಚಾ ಕಮ್ಮಿ ಮೊಣಕಾಲಿನವರೆಗೂ ಬರುವ ಈ ಗಮ್‌ಬೂಟ್‌ಗಲನ್ನು ಜೀನ್ಸ್ ಪ್ಯಾಂಟ್, ಲೆಗ್ಗಿಂಗ್ಸ್, ಟ್ರೆಂಚ್ ಕೋಟ್ ಹಾಗೂ ಶಾರ್ಟ್‌ಗಳ ಜೊತೆ ಹಾಕಿಕೊಳ್ಳಬಹುದು.
ಮಳೆ ಶುರುವಾಗಿದೆ. ಆಫೀಸು, ಶಾಲಾ ಕಾಲೇಜಿಗೆ ಹೋಗುವವರು ತಮ್ಮ ತಮ್ಮ ಬ್ಯಾಗ್‌ನಲ್ಲಿ ಛತ್ರಿಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಮಳೆಯಿಂದ ಕೇವಲ ತಲೆಯನ್ನು ರಕ್ಷಿಸಿಕೊಂಡರೆ ಸಾಕೇ? ಇಲ್ಲ, ಕೈ- ಕಾಲುಗಳನ್ನೂ ಕಾಪಾಡಿಕೊಳ್ಳಬೇಕು. ಅದಕ್ಕೆಂದು ಹೋದÇÉೆÇÉಾ ರೈನ್ ಕೋಟ್ ಧರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಗಮ್‌ಬೂಟ್‌ಗಳು ಸಹಾಯಕ್ಕೆ ಬರುತ್ತವೆ. ನಾವು ಪಾದದ ಆರೈಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಸಮೀಕ್ಷೆಯೊಂದರ ಪ್ರಕಾರ ಮನುಷ್ಯ ಅತಿ ಹೆಚ್ಚು ನಿರ್ಲಕ್ಷಿಸುವ ದೇಹದ ಅಂಗ ಎಂದರೆ ಕಾಲುಗಳು. ಪೆಡಿಕ್ಯೂರ್ ಮಾಡಿಸಿಕೊಳ್ಳಲು ಬಿಡುವಿಲ್ಲ ಎಂದೋ, ಅಥವಾ ಪಾದಗಳಿಗೆ ಆರೈಕೆ ಬೇಕಿಲ್ಲ ಎಂದೋ ಜನರು ದೇಹದ ಈ ಅಂಗವನ್ನು ನಿರ್ಲಕ್ಷಿಸುತ್ತಾರೆ.
ಗಮ್‌ಬೂಟ್ ಎಂದಾಗ ಕಣ್ಣ ಮುಂದೆ ಬರುವುದು ಕಟ್ಟಡ ಕಾಮಗಾರಿ ನಡೆಯುವ ಸೈಟ್‌ಗಳಲ್ಲಿ ಕೆಲಸ ಮಾಡುವವರು ತೊಟ್ಟ ಸಿಮೆಂಟ್ ಕೊಳೆ ಮೆತ್ತಿಕೊಂಡ ಶೂಗಳು. ಆದರೀಗ ತೋಟ, ಗ¨ªೆ ಅಥವಾ ಸೈಟ್‌ಗಳಲ್ಲಿ ಕೆಲಸ ಮಾಡುವವರು ಮಾತ್ರವಲ್ಲ, ಆಫೀಸ್ ಮತ್ತು ಕಾಲೇಜಿಗೆ ಹೋಗುವವರು ಸಹ ಗಮ್ ಬೂಟ್‌ಗಳನ್ನು ತೊಡಬಹುದು. ಏಕೆಂದರೆ ಗಮ್ ಬೂಟ್‌ಗಳು ಕಪ್ಪು, ಕಂದು ಅಥವಾ ಗಾಢವಾದ ಬೋರಿಂಗ್ ಬಣ್ಣಗಳಲ್ಲಿ ಮಾತ್ರವಲ್ಲ, ಕಣ್ಣಿಗೆ ಮುದ ನೀಡುವ ತಿಳಿ ಬಣ್ಣಗಳಲ್ಲೂ ಲಭ್ಯ ಇವೆ. ಅನಿಮಲ್ ಪ್ರಿಂಟ್, ಮಿಲಿಟರಿ ಪ್ರಿಂಟ್, ಫ್ಲೋರಲ್ ಪ್ರಿಂಟ್, ಪೋಲ್ಕಾ ಡಾಟ್ಸ್, ಚೆಕÕ…, ಬ್ರಿಟಿಷ್ ಫ್ಲಾÂಗ್ (ಧ್ವಜ), ಅಮೆರಿಕನ್ ಫ್ಲಾÂಗ್, ಸಾಲಿಡ್ ಕಲರ್ಡ್, ಸ್ಪ್ರೆà ಪೇಂಟ್, ಕಾಮಿಕ್ ಪ್ರಿಂಟ್, ರೇನ್‌ಬೋ ಪ್ರಿಂಟ್ (ಕಾಮನ ಬಿಲ್ಲಿನ ಬಣ್ಣಗಳು), ಸ್ಕಲ್ (ಬುರುಡೆ) ಡಿಸೈನ್, ಹೀಗೆ ಮುಗಿಯದಷ್ಟು ವಿನ್ಯಾಸಗಳ ಉದ್ದ ಪಟ್ಟಿಯೇ ಇದೆ!
ಇವುಗಳನ್ನು ಕಾಲುಗಳಿಗೆ ಬಿಗಿಯಾಗಿ ಕಟ್ಟಿಕೊಳ್ಳಲು ಲೇಸ್, ಬಟನ್ (ಗುಂಡಿ), ವೆಲೊðà, ಬಕಲ…, ಜಿಪ್ ಮುಂತಾದ ಮಾದರಿಗ ಗಮ್ ಬೂಟ್‌ಗಳು ಮಾರುಕಟ್ಟೆಯಲ್ಲಿವೆ. ಇವುಗಳ ಅಂದವನ್ನು ಹೆಚ್ಚಿಸುವ ಚಿಕ್ಕ ಪುಟ್ಟ ಬೋ (ರಿಬ್ಬನ್ ಬಳಸಿ ಗಂಟು ಹಾಕುವ ಒಂದು ಬಗೆ), ಕ್ಲಿಪ್, ಕೀ ಚೈನ್‌ನಂಥ ಹ್ಯಾಂಗಿಂಗ್‌ಗಳು, ಮ್ಯಾಗ್ನೆಟ್ (ಅಯಸ್ಕಾಂತ), ಮಣಿಗಳು ಇತ್ಯಾದಿ ಆಯ್ಕೆಗಳೂ ಇವೆ. ಇನ್ನು ನಿಮಗೆ ಬೇಕಾದ ಬಣ್ಣ ಮತ್ತು ವಿನ್ಯಾಸದ ಗಮ್ ಬೂಟ್‌ಗಳೂ ಲಭ್ಯ. ನಿಮ್ಮ ಹೆಸರು, ಭಾವಚಿತ್ರ, ನಿಮ್ಮ ಸಾಕು ಪ್ರಾಣಿಯ ಹೆಸರು ಅಥವಾ ಚಿತ್ರ, ನಿಮ್ಮ ನೆಚ್ಚಿನ ಸೂಪರ್ ಹೀರೋನ ಚಿತ್ರವನ್ನು ಗಮ್ ಬೂಟ್‌ಗಳಲ್ಲಿ ಮೂಡಿಸಬಹುದು. ಇವುಗಳನ್ನು ಮಾಡಿಕೊಡುವ ಆನ್‌ಲೈನ್ ಸೇವೆಗಳೂ ಇವೆ.
ಹೆಚ್ಚಾಕಮ್ಮಿ ಮೊಣಕಾಲವರೆಗೂ ಬರುವ ಈ ಗಮ್ ಬೂಟ್‌ಗಳನ್ನು ಜೀ®Õ… ಪ್ಯಾಂಟ್, ಲೆಗಿಂಗÕ…, ಟ್ರೆಂಚ್ ಕೋಟ್, ಲಂಗ ಮತ್ತು ಶಾರ್ಟ್ (ಗಿಡ್ಡ) ದಿರಿಸುಗಳ ಜೊತೆ ಹಾಕಿಕೊಳ್ಳಬಹುದು. ಗಮ್ ಬೂಟ್ ಫ್ಲಾಟ್ ಆಗಿರಬೇಕೆಂದೇನಿಲ್ಲ. ಇವುಗಳಲ್ಲೂ ಹೈ ಹೀಲ್ಡ… ಆಯ್ಕೆಗಳಿವೆ. ಧರಿಸಿದ ಬಟ್ಟೆ ಸಿಂಪಲ್ ಆದರೂ ಪರವಾಗಿಲ್ಲ, ಪಾದರಕ್ಷೆಗಳು ವಿಶಿಷ್ಟ ವಾಗಿದ್ದರೆ ಅತ್ಯಾಕರ್ಷಕವಾಗಿ ಕಾಣುವುದರಲ್ಲಿ ಅನುಮಾನ ಬೇಡ. ಹಾಗಾಗಿ ಮತ್ತೆ ಮಳೆ ಬಂದಾಗ ಕಾಲಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಚೆಂದವೂ ಕಾಣಬಹುದು.
– ಅದಿತಿಮಾನಸ ಟಿ. ಎಸ್.