Advertisement

Shocking: ಜುಜುಬಿ 500 ರೂ.ಗೆ ಸಿಗುತ್ತೆ 1 ಬಿಲಿಯ ಆಧಾರ್‌ ವಿವರ

11:50 AM Jan 04, 2018 | udayavani editorial |

ಹೊಸದಿಲ್ಲಿ : ಆಧಾರ್‌ ಕಾರ್ಡ್‌ ಡೇಟಾ ಭದ್ರತೆ ಮತ್ತು ಸುರಕ್ಷೆಯ ಬಗ್ಗೆ ಯುಐಡಿಎಐ ಮತ್ತು ಕೇಂದ್ರ ಸರಕಾರ ಎಷ್ಟೇ ಭರವಸೆ ನೀಡಿದರೂ 12 ಡಿಜಿಟ್‌ಗಳ ಈ ವಿಶಿಷ್ಟ ಗುರುತು ಸಂಖ್ಯೆಯ ಡಾಟಾಗಳನ್ನು ಸುಲಭದಲ್ಲಿ ಮತ್ತು ಅನಿರ್ಬಂಧಿತವಾಗಿ ಜುಜುಬಿ ಹಣಕ್ಕೆ ಖರೀದಿಸಲು ಸಾಧ್ಯವಿದೆ ಎಂಬುದು “ದ ಟ್ರಿಬ್ಯೂನ್‌’ ನಡಸಿರುವ ತನಿಖೆಯಲ್ಲಿ ಬಹಿರಂಗವಾಗಿದೆ.

Advertisement

ತನ್ನ ವರದಿಗಾರರು ವಾಟ್ಸಾಪ್‌ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್‌ ಒಬ್ಬರಿಗೆ ಕೇವಲ 500 ರೂ. ಪಾವತಿಸಿ ಆಧಾರ್‌ ಡಾಟಾ ಖರೀದಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 

ಹೀಗೆ ಖರೀದಿ ನಡೆಸಿದ ಕೇವಲ 10 ನಿಮಿಷಗಳಲ್ಲಿ ಆ ಏಜಂಟ್‌ ಪತ್ರಿಕಾ ವರದಿಗಾರನಿಗೆ ಲಾಗಿನ್‌ ಐಡಿ ಮತ್ತು ಪಾಸ್‌ ವರ್ಡ್‌ ಕೊಟ್ಟಿದ್ದಾನೆ. ಇದರ ಮೂಲಕ ನೂರು ಕೋಟಿ ಆಧಾರ್‌ ನಂಬರ್‌ಗಳಿಗೆ ಅನಿರ್ಬಂಧಿತ ಸಂಪರ್ಕ ದೊರಕಿ ಅವುಗಳಲ್ಲಿನ ಖಾಸಗಿ ಮಾಹಿತಿಗಳನ್ನು ತನಿಖಾ ವರದಿಗಾರ ಪಡೆದಿರುವುದಾಗಿ “ದ ಟ್ರಿಬ್ಯೂನ್‌’ ವರದಿ ತಿಳಿಸಿದೆ.

ಲಾಗ್‌ ಇನ್‌ ಗೇಟ್‌ವೇ ಮೂಲಕ ಯಾರೇ ಆದರೂ ಯಾವುದೇ ನಿರ್ದಿಷ್ಟ ಆಧಾರ್‌ ನಂಬರ್‌ ಅನ್ನು ಪೋರ್ಟಲ್‌ನಲ್ಲಿ ತಲುಪಬಹುದಾಗಿದ್ದು ಆ ನಂಬರ್‌ನ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್‌ ಕೋಡ್‌, ಫೋಟೋ, ಫೋನ್‌ ನಂಬರ್‌, ಇ-ಮೇಲ್‌ ವಿಳಾಸ ಇತ್ಯಾದಿಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. 

ಇದಕ್ಕಿಂತ ಗಂಭೀರವಾದ ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಹೆಚ್ಚುವರಿಯಾಗಿ 300 ರೂ.ಗಳನ್ನು ಏಜಂಟ್‌ಗೆ ಪಾವತಿಸಿದರೆ ಆಧಾರ್‌ ಕಾರ್ಡ್‌ ಪ್ರಿಂಟ್‌ ಮಾಡಬಲ್ಲ ಸಾಫ್ಟ್ ವೇರನ್ನು ಕೂಡ ಆತ ಒದಗಿಸುತ್ತಾನೆ ಎಂದು ಪತ್ರಿಕಾ ವರದಿ ತಿಳಿಸಿದೆ. 

Advertisement

ಆಧಾರ್‌ ಕುರಿತ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next