Advertisement

ಪೇಯ್ಡ್ ಆಗಲಿದೆ ಗೂಗಲ್‌ ಮೀಟ್‌! ; ಆನ್‌ಲೈನ್‌ ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ

02:24 AM Sep 29, 2020 | Hari Prasad |

ಹೊಸದಿಲ್ಲಿ: “ಗೂಗಲ್‌ ಮೀಟ್‌’ನಲ್ಲಿ ಗಂಟೆಗಟ್ಟಲೆ ಸಭೆಗಳನ್ನು, ವೆಬಿನಾರ್‌ಗಳನ್ನು ನಡೆಸುವ ಉಚಿತ ಸೌಲಭ್ಯಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ.

Advertisement

ಅ. 1ರಿಂದ “ಗೂಗಲ್‌ ಮೀಟ್‌ ಫ್ರೀ ವರ್ಷನ್‌’ನಡಿ ನಡೆಸಲಾಗುವ ಸಭೆಗಳು, ವೆಬಿನಾರ್‌ಗಳು ಅಥವಾ ಆನ್‌ಲೈನ್‌ ತರಗತಿಗಳ ಕಾಲಾವಧಿ ಕೇವಲ 60 ನಿಮಿಷಕ್ಕೆ ಸೀಮಿತವಾಗಲಿವೆ.

ಈ ಹೊಸ ನಿಯಮ “ಜಿ ಸೂಟ್‌’ ಹಾಗೂ “ಜಿ ಸೂಟ್‌ ಫಾರ್‌ ಎಜುಕೇಷನ್‌’ ಗ್ರಾಹಕರಿಗೂ ಅನ್ವಯವಾಗಲಿದೆ.

“ಜಿ ಸೂಟ್‌’ ಹಾಗೂ “ಜಿ ಸೂಟ್‌ ಫಾರ್‌ ಎಜುಕೇಷನ್‌’ ಸೌಲಭ್ಯಗಳನ್ನು ಪಡೆಯ ಬಯಸುವ ಯಾವುದೇ ಸಂಸ್ಥೆ ಮಾಸಿಕ ಅಂದಾಜು 1,800 ರೂ.ಗಳನ್ನು ನೀಡಿ ಚಂದಾದಾರರಾಗಬೇಕಿದೆ. ಆ ಸೌಲಭ್ಯಗಳಡಿ, ಏಕಕಾಲದಲ್ಲಿ 250 ಸಭಿಕರನ್ನು ಸೇರಿಸಿ ಸಭೆ ನಡೆಸಲು, ಲೈವ್‌ ಸ್ಟ್ರೀಮಿಂಗ್‌ ಮೂಲಕ 1 ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.

ಜತೆಗೆ, ಆನ್‌ಲೈನ್‌ ಸಭೆ, ವೆಬಿನಾರ್‌ ಅಥವಾ ತರಗತಿಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಸಂರಕ್ಷಿಸಿಡುವ ಸೌಲಭ್ಯವೂ ದೊರಕಲಿದೆ.

Advertisement

ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚು ಪ್ರವರ್ಧಮಾನಕ್ಕೇರಿದ ಗೂಗಲ್‌ ಮೀಟ್‌ನಡಿ ಅನೇಕ ತರಗತಿಗಳು, ಸಭೆಗಳು ಜರಗಿವೆ. ದಿನವೊಂದಕ್ಕೆ 1 ಕೋಟಿ ಜನ ಗೂಗಲ್‌ ಮೀಟ್‌ ಬಳಸುತ್ತಿದ್ದರೆಂದು ಏಪ್ರಿಲ್‌ನ ಅಂಕಿ-ಅಂಶಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next