Advertisement

ಬಿಹಾರ: ಕುಡಿದು ಪತ್ನಿಯೊಂದಿಗೆ ಜಗಳ; ತಪ್ಪೇ ಮಾಡದ ಮೂರು ವರ್ಷದ ಮಗಳನ್ನೇ ಕೊಂದ ಪಾಪಿ ತಂದೆ

11:08 AM Jul 06, 2022 | Team Udayavani |

ಬಿಹಾರ:  ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಮೂರು ವರ್ಷದ ಮಗಳನ್ನು ಥಳಿಸಿ ಹತ್ಯೆಗೈದಿರುವ ಘಟನೆ ಬಿಹಾರದ ಗಾಯತ್ರಿನಗರದ ಮೋತಿಹಾರಿಯಲ್ಲಿ ಮಂಗಳವಾರ ರಾತ್ರಿ ( ಜು.5 ರಂದು) ನಡೆದಿದೆ.

Advertisement

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಬಿನೋದ್‌, ಕುಡಿದು ಆಗಾಗ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಕಳೆದ ರಾತ್ರಿ ಕುಡಿದ ಆಮಲಿನಲ್ಲಿ ಮನೆಗೆ ಬಂದು ಹೆಂಡತಿಗೆ ಹೊಡೆಯಲು ಆರಂಭಿಸಿದ್ದಾನೆ. ಜಗಳದ ನಡುವೆಯೇ ಹೆಂಡತಿ ಯಾಕೆ ಕುಡಿತ್ತೀಯ, ಕುಡಿಯುವುದನ್ನು ನಿಲ್ಲಿಸು ಎಂದು ಹೇಳಿ ಪ್ರತಿರೋಧ ಒಡ್ಡಿದ್ದಾಳೆ. ಈ ವೇಳೆ ಆಮಲಿನಲ್ಲಿದ್ದ ಬಿನೋದ್‌ ಹೆಂಡತಿಯ ಮಾತಿಗೆ ಸಿಟ್ಟಾಗಿ ಪಕ್ಕದಲ್ಲಿದ್ದ ತನ್ನ ಮೂರು ವರ್ಷದ ಮಗಳನ್ನು ಹೊಡೆಯಲು ಆರಂಭಿಸಿದ್ದಾನೆ.

ಇದನ್ನೂ ಓದಿ: ಚಂದ್ರಶೇಖರ್‌ ಗುರೂಜಿ ಹತ್ಯೆ: ವಿಚಾರಣೆಯಲ್ಲಿ ಹಂತಕರು ಹೇಳಿದ್ದೇನು!

ನೆಲದ ಮೇಲಾಕಿ, ನೆಲಕ್ಕೆ ಬಡಿದು ಹಿಗ್ಗಾಮುಗ್ಗ ಥಳಿಸಿದ್ದಾನೆ. ಪರಿಣಾಮ ಮೂರು ವರ್ಷದ ಬೇಬಿ ಕುಮಾರಿ ನೋವಿನಲ್ಲಿ ಒದ್ಡಾಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಬಿನೋದ್‌ ನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next