Advertisement

ಶಂಕಾಸ್ಪದ ಡ್ರೋನ್‌ಗಳಿಗೆ ಇನ್ನು ಬೀಳುತ್ತೆ ಗುಂಡು!

07:05 AM Sep 11, 2017 | Harsha Rao |

ಹೊಸದಿಲ್ಲಿ: ಆಗಸದಲ್ಲಿ ಹಾರಾಡುತ್ತಿರುವ ಡ್ರೋನ್‌ಗಳು, ಹಾರುವ ವಸ್ತುಗಳು ಇತ್ಯಾದಿಗಳ ಮೇಲೆ ಇನ್ನು ಮುಲಾಜೇ ಇಲ್ಲ! ಇವುಗಳ ಮೇಲೆ ಉಗ್ರ ನಿಗ್ರಹ ದಳ “ಎನ್‌ಎಸ್‌ಜಿ’ ಅಥವಾ ಕೈಗಾರಿಕಾ ಭದ್ರತಾ ದಳ “ಸಿಐಎಸ್‌ಎಫ್’ ನೇರ ಕ್ರಮ ಕೈಗೊಳ್ಳಲಿದ್ದು, ಡ್ರೋನ್‌ಗಳನ್ನು ಹೊಡೆದುರುಳಿಸಲಿವೆ. 

Advertisement

ಇಂಥದ್ದೊಂದು ಅಧಿಕಾರವನ್ನು ಎರಡೂ ಪಡೆಗಳಿಗೆ ನೀಡಲು ಕೇಂದ್ರ ಸರಕಾರ ಸಜ್ಜಾಗಿದೆ. ಇದಕ್ಕಾಗಿ ಹೊಸ ನೀತಿಯೊಂದನ್ನು ಸಿದ್ಧಪಡಿಸುತ್ತಿದೆ. ಕೆಳ ಮಟ್ಟದಲ್ಲಿ ಹಾರಾಡುವ ವಸ್ತುಗಳು, ಡ್ರೋನ್‌ಗಳು, ಗ್ಲೆ„ಡರ್‌ಗಳು ಇತ್ಯಾದಿಗಳಿಂದ ಭಯೋತ್ಪಾದಕ ದಾಳಿ ನಡೆವ ಅಪಾಯದ ಹಿನ್ನೆಲೆಯಲ್ಲಿ ಪಡೆಗಳು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿವೆ. ಇದಕ್ಕಾಗಿ ಅವುಗಳಿಗೆ ಕಾನೂನಾತ್ಮಕ ಅವಕಾಶವನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಈ ಎರಡೂ ಪಡೆಗಳ ಬಳಿ, ಆಂತರಿಕ ರಾಡಾರ್‌, ರೇಡಿಯೋ ಫ್ರೀಕ್ವೆನ್ಸಿ ಜಾಮರ್‌ ಮತ್ತು ಡಿಟೆಕ್ಟರ್‌ ಹೊಂದಿದ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಸಿಸ್ಟಂ ಇವೆ. ಇವುಗಳ ಮೂಲಕ ಹಾರುವ ವಸ್ತುಗಳನ್ನು ಹೊಡೆದುರುಳಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next