Advertisement

SHOCKER: ಮೆಟ್ರೋದಲ್ಲಿ ಹಸ್ತಮೈಥುನ, ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲನ!!

05:35 PM Aug 31, 2023 | Team Udayavani |

ಹೊಸದಿಲ್ಲಿ: ಹೇಯ ಘಟನೆಯೊಂದರಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಕಿಕ್ಕಿರಿದ ಕೋಚ್‌ನಲ್ಲಿ ಪ್ರಯಾಣಿಸುವಾಗ ಕಾಮಾಂಧನೊಬ್ಬ ಹಸ್ತಮೈಥುನ ಮಾಡಿಕೊಂಡು ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲನ ಮಾಡಿ ವಿಕೃತಿ ಮೆರೆದಿದ್ದಾನೆ.

Advertisement

ಕೃತ್ಯ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ, ದೆಹಲಿ ಮೆಟ್ರೋದ ‘ರೆಡ್ ಲೈನ್’ ನಲ್ಲಿ ಬುಧವಾರ ರಾತ್ರಿ 8:30 ರ ಸುಮಾರಿಗೆ ನಾಚಿಕೆಗೇಡಿನ ಘಟನೆ ಸಂಭವಿಸಿದೆ.

ಆರೋಪಿಯು ಅಪ್ರಾಪ್ತ ವಯಸ್ಕ ಬಾಲಕಿ ಮತ್ತು ಆಕೆಯ ತಾಯಿ ಇರುವ ಬೋಗಿಯಲ್ಲಿಯೇ ಪ್ರಯಾಣಿಸುತ್ತಿದ್ದ. ರಕ್ಷಾ ಬಂಧನ ಹಬ್ಬದ ನಿಮಿತ್ತ ಜನ ಕಿಕ್ಕಿರಿದು ತುಂಬಿದ್ದರು. ಆ ವ್ಯಕ್ತಿ ಮಗುವಿನ ಮೇಲೆ ಹಸ್ತಮೈಥುನ ಮಾಡಿಕೊಡು ಸ್ಖಲನ ಮಾಡಿದ್ದಾನೆ. ಅದನ್ನು ಬಾಲಕಿಯ ತಾಯಿ ಗಮನಿಸಿ ಸೀಲಾಂಪುರ ನಿಲ್ದಾಣದಲ್ಲಿಇಳಿದರು. ಕೂಡಲೇ ಗಮನಿಸಿದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಇಬ್ಬರು ಸಹ ಪ್ರಯಾಣಿಕರು ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಶಹದಾರ ನಿಲ್ದಾಣದಲ್ಲಿ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಹಸ್ತಾಂತರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೆಹಲಿ ಮೆಟ್ರೋದಲ್ಲಿ ಇಂತಹ ಕುಕೃತ್ಯಗಳ ಸರಣಿಯಲ್ಲಿ ಈ ಘಟನೆ ಇತ್ತೀಚಿನ ಸೇರ್ಪಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next