Advertisement

ತಂದೆ ಸಾವಿನ ಸುದ್ದಿ ತಿಳಿದು ಆಘಾತಗೊಂಡ ಮಗ ಸಾವು

03:45 AM Feb 04, 2017 | Team Udayavani |

ನಂಜನಗೂಡು: ವೈಷ್ಣೋದೇವಿ ದೇಗುಲಕ್ಕೆ ತೆರಳಿದ್ದ ಮೈಸೂರು ಜಿಲ್ಲೆ ನಂಜನಗೂಡಿನ ವೃದ್ಧರೊಬ್ಬರು ಅಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ತಿಳಿದು ಇವರ ಪುತ್ರನೂ ಆಘಾತಕ್ಕೊಳಕ್ಕೊಳಗಾಗಿ ಮೃತಪಟ್ಟಿದ್ದಾರೆ. ಇದರಿಂದ ತಂದೆ ಮಗ ಇಬ್ಬರೂ ಸಾವಿನಲ್ಲಿ ಒಂದಾಗಿದ್ದಾರೆ. 

Advertisement

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿನ ನಿವಾಸಿ ಮಿಲ್‌ ಮಾಧು ಎಂದೇ ಖ್ಯಾತರಾಗಿದ್ದ ಕೆ.ಮಾದಶೆಟ್ಟಿ (84) ಎಂಬುವವರು ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ ಹೃದಯಘಾತಕ್ಕೊಳಗಾಗಿ ಕುಸಿದು ಅಸ್ವಸ್ಥಗೊಂಡಿದ್ದರು. ಇವರನ್ನು ಅಲ್ಲಿನ ಕಟ್ರಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದರು. ಕುಟುಂಬಸ್ಥರಿಗೆ ವಿಷಯ ತಿಳಿಸಿ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿತ್ತು. ಪ್ರಾರ್ಥಿವ ಶರೀರವು ಶನಿವಾರ ಬೆಳಗ್ಗೆ ನಂಜನಗೂಡು ತಲುಪಲಿದೆ. ಮಾದಶೆಟ್ಟಿ ಅವರ ಪತ್ನಿ 10 ವರ್ಷದ ಹಿಂದೆ ತೀರಿಕೊಂಡಿದ್ದು, ನಾಲ್ವರು ಮಕ್ಕಳಲ್ಲಿ ಓರ್ವ ಮಗ ಕೂಡ ತಂದೆ ಜತೆ ಇಹಲೋಹ ತ್ಯಜಿಸಿದಂತಾಗಿದೆ.

ಮಗನೂ ಇಹಲೋಕ ತ್ಯಜಿಸಿದ: ಈ ನಡುವೆ ಶುಕ್ರವಾರ ಬೆಳಗ್ಗೆ ತಂದೆ ಮೃತಪಟ್ಟಿರುವ ಸುದ್ದಿ ಮಾದಶೆಟ್ಟಿ ಅವರ ಪುತ್ರ ಅರುಣಕುಮಾರ್‌ (43) ಅವರಿಗೆ ತಿಳಿದಿದೆ. ಈ ಸುದ್ದಿ ತಿಳಿದು ಅರುಣಕುಮಾರ್‌ ಕೂಡ ಆಘಾತಕ್ಕೊಳಗಾಗಿ ಅಸ್ವಸ್ಥರಾದರು. ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಸಂಜೆ ವೇಳೆಗೆ ಚಿಕಿತ್ಸೆ ಫ‌ಲಕಾರಿಯಾಗದೇ ಅರುಣಕುಮಾರ್‌ ಅಸುನೀಗಿದರು. ಅರುಣಕುಮಾರ್‌ ಅವರಿಗೆ ಪತ್ನಿ ಮತ್ತು ಓರ್ವ ಪುತ್ರಿ ಇದ್ದಾಳೆ. ತಂದೆ ಮತ್ತು ಮಗನ ಅಂತ್ಯಕ್ರಿಯೆಯು ಶನಿವಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next