ಕೋಲ್ಕತಾ: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪ್ರದರ್ಶಿಸಲೆಂದು ಪಶ್ಚಿಮ ಬಂಗಾಲ ಸರಕಾರ ಕಳುಹಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ.
ಯಾವುದೇ ಕಾರಣ ಕೊಡದೆಯೇ, ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
“ನೇತಾಜಿ ಅವರ 125ನೇ ಜನ್ಮದಿನಾಚರಣೆ ಪ್ರಯುಕ್ತ ನಾವು ಅದನ್ನೇ ಸ್ತಬ್ಧಚಿತ್ರವನ್ನಾಗಿಸಲು ಬಯಸಿದ್ದೆವು. ಆದರೆ ಕೇಂದ್ರದ ತಿರಸ್ಕಾರ ನಮಗೆ ಆಘಾತ ಉಂಟುಮಾಡಿದೆ.
ಇದನ್ನೂ ಓದಿ:ಕೋವಿಡ್ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ್ದು ದೊಡ್ಡಣ್ಣನ ಪಾತ್ರ: ಸಚಿವ ಸುಧಾಕರ್
ಇದರಿಂದಾಗಿ ಬಂಗಾಲದ ಜನರಿಗೆ ಭಾರೀ ನೋವಾಗಿದೆ’ ಎಂದು ಮಮತಾ ಅವರು ಪತ್ರದಲ್ಲಿ ಬರೆದಿದ್ದಾರೆ. ಇತ್ತೀಚೆಗಷ್ಟೇ ಕೇರಳ ಸರಕಾರವು ಕಳುಹಿಸಿದ್ದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕೇರಳ ಹಾಗೂ ಕರ್ನಾಟಕದಲ್ಲಿ ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.