Advertisement

ಶೋಭಾ ಮತ್ತೂಮ್ಮೆ ಸಂಸದೆಯಾಗಲಿದ್ದಾರೆ: ಕೋಟ

11:02 PM Mar 31, 2019 | sudhir |

ಕಾರ್ಕಳ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಮತ್ತೂಮ್ಮೆ ಸಂಸದೆಯಾಗಲಿದ್ದಾರೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅವರು ಮಾ.31ರಂದು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸಭಾಂಗಣದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಕಾರ್ಯಕರ್ತರಿಗೆ ಅಥವಾ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಅನ್ಯಾಯವಾದಾಗ ಶೋಭಾ ಕರಂದ್ಲಾಜೆ ಧಾವಿಸಿ ಬರುತ್ತಾರೆ. ಅನ್ಯಾಯದ ವಿರುದ್ಧ ಮುಂಚೂಣಿಯಾಗಿ ನಿಂತು ಹೋರಾಡುತ್ತಾರೆ. ಮೋದಿ ಮತ್ತೂಮ್ಮೆ ಪ್ರಧಾನಿ ಆಗಬೇಕೆಂಬ ಅಪೇಕ್ಷೆ ಎಲ್ಲೆಡೆಯಿದ್ದು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಶೋಭಾ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬರಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ನೋಟ್‌ ಬ್ಯಾನ್‌ ನಿಂದ ಧಗಾಕೋರರಿಗೆ ತೊಂದರೆ ಪ್ರಧಾನಿ ಮೋದಿ ನೋಟ್‌ ಬ್ಯಾನ್‌  ಮಾಡಿರುವುದರಿಂದ ಜನಸಾಮಾನ್ಯರಿಗೆ, ಬಡವರಿಗೆ ತೊಂದರೆಯಾಗಿದೆಯೇ? ಎಂದು ಪ್ರಶ್ನಿಸಿದ ಅವರು ಧಗಾಕೋರ ರಿಗೆ, ವಂಚಕರಿಗೆ ಮಾತ್ರ ಇದರಿಂದ ಪರಿ ತಪಿಸುವಂತೆ ಆಗಿದೆ. ಮೋದಿ ಚುನಾವಣಾ ಪೂರ್ವದಲ್ಲಿ ಹೇಳಿದಂತೆ ನೋಟ್‌ ಬ್ಯಾನ್‌ ಮೂಲಕ ಲೂಟಿಕೋರರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ ಎಂದರು.

ಉಡುಪಿ ಭಾಗದ ಜನರಿಗೆ ತಿಳಿವಳಿಕೆ ಕಡಿಮೆ ಎನ್ನುವ ಕುಮಾರಸ್ವಾಮಿಯವರು ಯಾವ ಆಧಾರದಲ್ಲಿ ಮತಕೇಳಲು ಈ ಭಾಗಕ್ಕೆ ಬರಲಿದ್ದಾರೆ ಎಂದು ಪ್ರಶ್ನಿಸಿದರು.

Advertisement

ಕೋಟ ಸವಾಲು
ದ.ಕ., ಉಡುಪಿ ಚುನಾವಣಾ ಉಸ್ತುವಾರಿಯಾಗಿ ಕಾಂಗ್ರೆಸ್‌ ಡಿ.ಕೆ. ಶಿವಕುಮಾರ್‌ ಅವರನ್ನು ನೇಮಿಸಿದೆ.ಇವರ ಹಣಬಲ ಗೆಲ್ಲು ವುದೋ, ಸುನಿಲ್‌ ಕುಮಾರ್‌ ಅವರ ಜನಬಲ ಗೆಲ್ಲುವುದೋ ನೋಡೋಣ ಎಂದು ಶ್ರೀನಿವಾಸ ಪೂಜಾರಿ ಸವಾಲು ಹಾಕಿದರು.

ಮೋದಿಯಿಂದ ಭಯೋತ್ಪಾದಕರ ವಿರುದ್ಧ ದಿಟ್ಟ ಕ್ರಮ: ಸುನಿಲ್‌
ಬಾಲ್‌ಕೋಟ್‌ ದಾಳಿ ಸಮರ್ಥಿಸಿ ಇಡೀ ಜಗತ್ತೇ ಕೊಂಡಾಡುವಾಗ ದೇಶ
ದೊಳಗಿರುವ ಮೋದಿ ವಿರೋಧಿಗಳು ದಾಳಿಗೆ ಸಾಕ್ಷ ಕೇಳುತ್ತಿರು ವುದು ದುರ್ದೈವ. ಭಯೋತ್ಪಾದಕರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವಂತಾಗಲು ಮೋದಿಯನ್ನು ಮತ್ತೂಮ್ಮೆ ಪ್ರಧಾನಿ ಮಾಡಲೇ ಬೇಕಾಗಿದೆ. ಈ ಚುನಾವಣೆಯಲ್ಲಿ ಚಲಾ ವಣೆಯಾಗುವ ಪ್ರತಿಯೊಂದು ಮತವೂ ಕೂಡ ಭಯೋತ್ಪಾದಕರ ವಿರುದ್ಧದ ಬುಲೆಟ್‌ ಆಗಲಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

ಕೇಂದ್ರ ಸರಕಾರ ಅನೇಕ ಜನಪರ ಯೋಜನೆ ಪರಿಣಾಮಕಾರಿಯಾಗಿ, ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಉಜ್ವಲ್‌ ಯೋಜನೆಯಲ್ಲಿ ಕಾರ್ಕಳ ತಾಲೂಕಿನಲ್ಲೇ 10 ಸಾವಿರ ಕುಟುಂಬಗಳಿಗೆ ಪ್ರಯೋಜನ ದೊರೆತಿದೆ. ಕೇಂದ್ರ ಸರಕಾರದ ಕೃಷಿ ಸಮ್ಮಾನ್‌ ನಿಧಿ ಯೋಜನೆ ವಿಳಂಬವಿಲ್ಲದೇ ಜಾರಿಯಾಗಿದೆ ಎಂದು ಸುನಿಲ್‌ ಕುಮಾರ್‌ ವಿವರಿಸಿದರು.

ಬಿಜೆಪಿ ಹಿರಿಯ ಮುಖಂಡ ಎಂ.ಕೆ. ವಿಜಯ ಕುಮಾರ್‌ ಮಾತನಾಡಿ, ದೇವರು ದೇಶಕ್ಕೆ ಕೊಟ್ಟ ಭಾಗ್ಯ ಮೋದಿ. ಅವರನ್ನು ಪ್ರಧಾನಿಯಾಗಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಬಲಿಷ್ಠ ಭಾರತಕ್ಕಾಗಿ ಬಿಜೆಪಿಗೆ ಮತನೀಡಿ: ಶೋಭಾ
ಈ ಬಾರಿಯ ಚುನಾವಣೆಯು ದೇಶಭಕ್ತರು ಹಾಗೂ ದೇಶದ್ರೋಹಿ ಗಳನ್ನು ಬೆಂಬಲಿಸುವವರ ಮಧ್ಯೆ ನಡೆಯುವಂತಹದ್ದು. ಬಲಿಷ್ಠ, ಶಕ್ತಿ ಯುವ ಭಾರತಕ್ಕಾಗಿ ಬಿಜೆಪಿಗಾಗಿ ಮತನೀಡಿ ಎಂದು ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು. ಮೋದಿ ಸರಕಾರ ರಕ್ಷಣಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದೆ. ತಲಾಖ್‌ ನಿಷೇಧಿಸಿ ಮುಸ್ಲಿಂ ಮಹಿಳೆಯರ ಕಣ್ಣೊರೆಸುವ ಕಾರ್ಯ ಮಾಡಿದೆ. ಈ ಬಾರಿ ಕಾಂಗ್ರೆಸ್‌ ಕಾರ್ಯಕರ್ತರಲ್ಲೂ ಮಾತನಾಡಿಸಿ ಮೋದಿಗಾಗಿ ಮತ ನೀಡುವಂತೆ ಮನವಿ ಮಾಡಿ ಎಂದು ಕಾರ್ಯಕರ್ತರಿಗೆ ಶೋಭಾ ಹೇಳಿದರು.

ಮಹಾಘಟಬಂಧನ್‌ ಮೂಲಕ ಮೊದಲ ಬಾರಿ ದುರ್ಬಲ ಸರಕಾರ ನೀಡಿದ ನಿದರ್ಶನ ಕರ್ನಾಟದಲ್ಲಿದೆ. ಭ್ರಷ್ಟಾಚಾರ ರಹಿತ ಸದೃಢ ಆಡಳಿತ ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ಶೋಭಾ ಅಭಿಪ್ರಾಯಪಟ್ಟರು.

ಮೌನ ಪ್ರಾರ್ಥನೆ
ಇತ್ತೀಚೆಗೆ ನಿಧನ ಹೊಂದಿದ ಬಿಜೆಪಿ ಕಾರ್ಯಕರ್ತರಾದ ಕಾರ್ಕಳ ಸುರೇಶ್‌ ಹಾಗೂ ಶಿರ್ಲಾಲು ಸುಕೇಶ್‌ ಶೆಟ್ಟಿಯವವ ಆತ್ಮಕ್ಕೆ ಶಾಂತಿ ಕೋರಿ ಇದೇ ಸಂದರ್ಭದಲ್ಲಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.

ದ.ಕ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್‌, ಹಿರಿಯ ಮುಖಂಡರಾದ ಪ್ರಭಾಕರ್‌ ಕಾಮತ್‌, ಮಹೇಶ್‌ ಶೆಟ್ಟಿ ಕುಡು³ಲಾಜೆ, ಗುರುಪ್ರಸಾದ್‌ ಶೆಟ್ಟಿ, ರೇಷ್ಮಾ ಉದಯಶೆಟ್ಟಿ, ರೈತಮೋರ್ಚಾ ಜಿಲ್ಲಾಧ್ಯಕ್ಷ ಮುತ್ಲುಪಾಡಿ ಸತೀಶ್‌ ಶೆಟ್ಟಿ, ನಗರ ಅಧ್ಯಕ್ಷ ಅನಂತಕೃಷ್ಣ ಶೆಣೈ, ಜಿಲ್ಲಾ ಉಪಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಸೋಜನ್‌ ಜೇಮ್ಸ್‌, ರವಿಪ್ರಸಾದ್‌ ಪ್ರಭು, ವಿವಿಧ ಮೋರ್ಚಾದ ಅಧ್ಯಕ್ಷರು, ಮಹಾಶಕ್ತಿಕೇಂದ್ರದ ಅಧ್ಯಕ್ಷರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್‌ ಸ್ವಾಗತಿಸಿ, ಬಿಜೆಪಿ ಕೇತ್ರಾಧ್ಯಕ್ಷ ಮಣಿರಾಜ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಣೂರು ನರಸಿಂಹ ಕಾಮತ್‌ ನಿರೂಪಿಸಿ, ಕರುಣಾಕರ್‌ ಕೋಟ್ಯಾನ್‌ ವಂದಿಸಿದರು.

ನಾಟಕ ಕಂಪೆನಿ
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಚುನಾವಣೆಯಲ್ಲಿ ನೇರವಾಗಿ ಎದುರಿಸಲಾಗದೆ ನಾನಾ ಕುತಂತ್ರದ ಮೂಲಕ ನಿಖೀಲ್‌ ಅವರನ್ನು ಗೆಲ್ಲಿಸುವ ವಿಫ‌ಲ ಯತ್ನ ನಡೆಸಲಾಗುತ್ತಿದೆ. ಜೆಡಿಎಸ್‌ ನಾಟಕವಾಡುತ್ತಿರುವ ಶೈಲಿ ಗುಬ್ಬಿ ನಾಟಕ ಕಂಪೆನಿಯನ್ನು ಮೀರಿಸುವಂತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ಯಾವುದೇ ಅನುದಾನ ದೊರೆತಿಲ್ಲ
ರಾಜ್ಯ ಸಮ್ಮಿಶ್ರ ಸರಕಾರದಿಂದ ಕರಾವಳಿ ಪ್ರದೇಶಗಳಿಗೆ ಯಾವುದೇ ಅನುದಾನ ದೊರೆಯುತ್ತಿಲ್ಲ. ಮರಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ನಿಲುವು ತಳೆಯುವಲ್ಲಿಯೂ ರಾಜ್ಯ ಸರಕಾರ ವಿಫ‌ಲವಾಗಿದೆ ಎಂದ ಸುನಿಲ್‌ ಕುಮಾರ್‌ ಅವರು ರೈತರ ಸಾಲ ಮನ್ನಾ ಘೋಷಿಸಿ ಅದೆಷ್ಟು ತಿಂಗಳು ಕಳೆದರೂ ರಾಜ್ಯ ಸರಕಾರ ರೈತರ ಖಾತೆಗೆ ಮೊತ್ತ ಜಮೆ ಮಾಡಿಲ್ಲ ಎಂದು ಶಾಸಕ ಸುನಿಲ್‌ ಕುಮಾರ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next