Advertisement

ದಿಲ್ಲಿ ವರೆಗೆ ಶೋಭಾ ಪಯಣ

03:11 AM May 24, 2019 | sudhir |

ಉಡುಪಿ: ದ್ವಿತೀಯ ಬಾರಿಗೆ ಪುನರಾಯ್ಕೆಯಾದ ಶೋಭಾ ಕರಂದ್ಲಾಜೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಮೂಲದವರು. ಬೆಂಗಳೂರು ಮತ್ತು ಮಣಿಪಾಲದಲ್ಲಿ ಉದ್ಯೋಗಿಯಾಗಿದ್ದರು. ಬಿಜೆಪಿ ಉಡುಪಿ ನಗರ, ಬಳಿಕ ಜಿಲ್ಲಾ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದರು, ಪ್ರಸ್ತುತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Advertisement

ಸುನಾಮಿ ಸಂದರ್ಭ
ಸುನಾಮಿ ದುರಂತ ಸಂದರ್ಭ ತಮಿಳುನಾಡಿನ ನಾಗಪಟ್ಟಣಂಗೆ ಧಾವಿಸಿ ನೆರವು ಕಾರ್ಯಗಳಲ್ಲಿ ಭಾಗಿಯಾಗಿದ್ದರು. ರಾಜ್ಯ 2009ರಲ್ಲಿ ಭೀಕರ ನೆರೆ ಹಾವಳಿಗೆ ತುತ್ತಾದಾಗ ಮಂತ್ರಾಲಯ, ರಾಯಚೂರು ಜಿಲ್ಲೆಗಳಿಗೆ ಧಾವಿಸಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದರು. ಶಬರಿಮಲೆಯಲ್ಲಿ 2010ರಲ್ಲಿ ಕಾಲು¤ಳಿತ ನಡೆದಾಗಲೂ ಧಾವಿಸಿ ಸೇವೆಗಳಲ್ಲಿ ತೊಡಗಿದ್ದರು.

ಎಂಡೋ ಪೀಡಿತರ ಸೇವೆ
ಅಧಿಕಾರ ಇಲ್ಲದಾಗಲೂ ಎಂಡೋಪೀಡಿತ ಪ್ರದೇಶಗಳಲ್ಲಿ ಅಂಗವಿಕಲರ ಸಂಕಷ್ಟಗಳನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ಮತ್ತು ಮಾಸಾಶನ ಕೊಡಿಸುವಲ್ಲಿ ಯಶಸ್ವಿಯಾದರು.

ಮೈಸೂರಿನ ಉಸ್ತುವಾರಿ ಸಚಿವೆಯಾಗಿ ಅವರು ನಡೆಸಿದ ಅದ್ದೂರಿ ದಸರಾ ವಿಶ್ವದ ಗಮನ ಸೆಳೆದಿತ್ತು. ಮೈಸೂರು, ತಲಕಾಡಿನ ಅಭಿವೃದ್ಧಿಗಾಗಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ಮಾಡಿದರು.

ಪಂ.ರಾಜ್‌ ಇಲಾಖೆ ನಂ. 1
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಸಚಿವೆಯಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಆ ವರ್ಷದಲ್ಲಿ ನಮ್ಮ ರಾಜ್ಯ ನಂ. 1 ಆಗುವ ಅದ್ಭುತ ಸಾಧನೆ ಮಾಡಿದರು. ಇಂಧನ ಸಚಿವೆಯಾಗಿ ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆ ಕಡೆಗೆ ವಿಶೇಷ ಗಮನ ನೀಡಿದರು.

Advertisement

ನಕಲಿ ಪಡಿತರ ಚೀಟಿ ಪತ್ತೆ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆಯಾಗಿ ಇಲಾಖೆಯಲ್ಲಿ ಪಾರದರ್ಶಕತೆ ತಂದರು. ಇದು ಮುಂದೆ ದೇಶಕ್ಕೆ ಮಾದರಿಯಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಕಡಿಮೆ ಅವಧಿಯಲ್ಲಿ ಕೂಡ ಆ ಇಲಾಖೆಗಳಿಗೆ ಹೊಸ ಕಾಯಕಲ್ಪ ನೀಡಿದ್ದರು.

ಸಂಸದೆಯಾಗಿ ಸಾಧನೆ
ಉಡುಪಿ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಿದ್ದು, ರಾ. ಹೆದ್ದಾರಿಗಳ ಉನ್ನತೀಕರಣ, ವಿವಿಧ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ
ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆ ಗೇರಿಸುವ ಕೆಲಸ ಮಾಡಿದರು. ಕೇಂದ್ರ ಪುರಸ್ಕೃತ ಅಭಿವೃದ್ಧಿ ಯೋಜನೆಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷೆಯಾಗಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಕೊನೆಯ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲಿಯೇ  ಮೊದಲ ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next