ನವ ದೆಹಲಿ : ಪ್ರಧಾನಿ ನರೇಂದ್ರ ಮೋದ ಸಾರಥ್ಯದ ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಇಂದು (ಗುರುವಾರ, ಜುಲೈ 8) ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಕಾರ್ಯಭಾರ ಆರಂಭಿಸಿದ್ದಾರೆ.
ಇದನ್ನೂ ಓದಿ : ಸಹಕಾರ ಸಚಿವಾಲಯದ ರಚನೆ ರಾಜ್ಯ ಸರ್ಕಾರಗಳ ಫೆಡರಲ್ ಹಕ್ಕುಗಳ ಉಲ್ಲಂಘನೆ : ಸೀತಾರಾಮ್ ಯೆಚೂರಿ
ನಿನ್ನೆ (ಬುಧವಾರ, ಜುಲೈ 7 ರಂದು ಮೋದಿ ಸರ್ಕಾರದ ನೂತನ ಸಚಿವ ಸಂಪುಟಕ್ಕೆ ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕರಂದ್ಲಾಜೆಯವರು ದೆಹಲಿಯ ಕೃಷಿಭವನದಲ್ಲಿ ಇಂದು ಪದಗ್ರಹಣ ಮಾಡಿದ್ದು ರೈತರ ಸಂಕೇತವಾದ ಹಸಿರು ಶಾಲು ಧರಿಸಿ ಅವರು ಸಚಿವರ ಕಾರ್ಯಭಾರ ವಹಿಸಿಕೊಂಡಿದ್ದಾರೆ.
2004ರಲ್ಲಿ ವಿಧಾನ ಪರಿಷತ್ತಿಗೆ, 2008ರಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾದರು. 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮಹಿಳಾ ಸಬಲೀಕರಣ ಸಮಿತಿ, ರಕ್ಷಣಾ ಸ್ಥಾಯೀ ಸಮಿತಿ, ಕೃಷಿ ಸಚಿವಾಲಯ ಸಲಹಾ ಸಮಿತಿ ಸದಸ್ಯೆಯಾದರು. 2019ರಲ್ಲಿ ಇದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಈಗ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎರಡನೇ ಅವಧಿಗೆ 2019 ರ ಮೇ ತಿಂಗಳಲ್ಲಿ ರಚನೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಯಾಗಿದೆ. ನಿನ್ನೆ (ಬುಧವಾರ, ಜುಲೈ 7 ) ರಾಷ್ಟ್ರಪತಿ ಭವನದಲ್ಲಿ ಕೋವಿಡ್-19 ಮಾರ್ಗಸೂಚಿಗೆ ಅನುಗುಣವಾಗಿ ಪ್ರಮಾನ ವಚನ ಸ್ವೀಕಾರ ಸಮಾರಂಭದಲ್ಲಿ ಒಟ್ಟು 43 ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಇದನ್ನೂ ಓದಿ : ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಅಧಿಕಾರ ಸ್ವೀಕಾರ