ಉಡುಪಿ: ಕಡಿಯಾಳಿಯ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಡಿಯಾಳಿ ಕಮಲಾಬಾಯಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ ದಾಂಡಿಯಾ ನೃತ್ಯದಲ್ಲಿ ಉಡುಪಿ ಸುತ್ತಮುತ್ತಲಿನ ಮಹಿಳೆಯರು ಜಾತಿ-ಪಕ್ಷಭೇದ ಮರೆತು ದೊಡ್ಡ ಸಂಖ್ಯೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.
ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ದಾಂಡಿಯಾ ನೃತ್ಯದಲ್ಲಿ ಸ್ವತಃ ಪಾಲ್ಗೊಂಡರು. ಶಾಂತಾ ವಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪವರ್ ಸಂಸ್ಥೆ ಅಧ್ಯಕ್ಷೆ ಶ್ರುತಿ ಜಿ. ಶೆಣೈ ಮುಖ್ಯ ಅತಿಥಿಗಳಾಗಿದ್ದರು.
ಶಾಸಕ ಕೆ. ರಘುಪತಿ ಭಟ್, ಸಮಿತಿಯ ಅಧ್ಯಕ್ಷ ಪ. ವಸಂತ ಭಟ್,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಮಹಿಳಾ ಮಂಡಳಿ ಪದಾಧಿಕಾರಿಗಳಾದ ವೇದಾ ವಿ. ಭಟ್, ಸಂಧ್ಯಾ ಪ್ರಭು, ಭಾರತೀ ಚಂದ್ರಶೇಖರ್, ಗಣ್ಯರಾದ ಉದಯ ಕುಮಾರ ಶೆಟ್ಟಿ, ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
ಆಶಿತಾ ರಾವ್ ಸ್ವಾಗತಿಸಿ ಡಾ| ಸ್ವಾತಿ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಿತಾ ಶೇರಿಗಾರ್ ವಂದಿಸಿದರು. ರಾತ್ರಿ 10.30ರ ಬಳಿಕವೂ ನೃತ್ಯ ಮುಂದುವರಿಯಿತು.
ಈ ನೃತ್ಯ ಗುಜರಾತ್, ಮಹಾರಾಷ್ಟ್ರ,ರಾಜಸ್ಥಾನದಲ್ಲಿ ಹೆಚ್ಚು ಜನಪ್ರಿಯ. ನವರಾತ್ರಿಯಲ್ಲಿ ಇದು ನಡೆಯುತ್ತದೆ. ಉಡುಪಿಯಲ್ಲಿ ಕಳೆದ 3ವರ್ಷಗಳಿಂದ ಕುಂಜಿಬೆಟ್ಟಿನ ಮೈದಾನದಲ್ಲಿ ನಡೆಯುತ್ತಿದ್ದರೆ ಈ ಬಾರಿ ಮೊದಲ ಬಾರಿಗೆ ಕಡಿಯಾಳಿಯಲ್ಲಿ ಆಯೋಜಿಸಲಾಯಿತು. ಇದರಿಂದಾಗಿ ಹೆಚ್ಚಿನ ಜನರಿಗೆ ಪಾಲ್ಗೊಳ್ಳಲು ಅವಕಾಶ ದೊರಕಿತು ಮತ್ತು ಮೈದಾನ ಕಿಕ್ಕಿರಿದಿತ್ತು.
ಸರ್ವಧರ್ಮೀಯರ ಸಹಭಾಗಿತ್ವ
ಹಿಂದೂ, ಮುಸ್ಲಿಂ, ಕ್ರೈಸ್ತರಾದಿ ಎಲ್ಲ ಧರ್ಮೀಯರೂ ದಾಂಡಿಯಾ ನರ್ತನದಲ್ಲಿ ಪಾಲ್ಗೊಂಡರು.