Advertisement

Go Back ಅಭಿಯಾನದಿಂದ ವಿಚಲಿತಳಾಗಲ್ಲ… ಕೇಂದ್ರ ನಾಯಕರೇ ಉತ್ತರಿಸುತ್ತಾರೆ: ಕರಂದ್ಲಾಜೆ

03:31 PM Mar 13, 2024 | sudhir |
ವಿಜಯಪುರ : ಬೇರೆಯವರು ಟಿಕೆಟ್ ಕೇಳುವುದು ತಪ್ಪಲ್ಲ, ಆದರೆ ಅವಮಾನ ಮಾಡೋದು ಸರಿಯಾದ ಕ್ರಮವಲ್ಲ. ಇಂಥ ವರ್ತನೆಗೆ ನಾನು ಉತ್ತರಿಸಲಾರೆ, ಕೇಂದ್ರದ ನಾಯಕರು ಉತ್ತರ ಕೊಡಲಿದ್ದಾರೆ. ಟಿಕೆಟ್ ಅಪೇಕ್ಷಿತರು, ಹೊರಗಿನವರು ಬಂದವರು ಮಾಡುತ್ತಿದ್ದಾರೆ. ನಾನು ವಿಚಲಿತಳಾಗಿಲ್ಲ, ಪಕ್ಷದ ಕಾರ್ಯಕರ್ತರು ವಿಚಲಿತರಾಗಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನದ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಹವಾಗಿ ಗೊಂದಲವಿದೆ, ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲುವ ಕ್ಷೇತ್ರವಾಗಿರುವ ಕಾರಣ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ಗೆ ಬೇಡಿಕೆ ಹೆಚ್ಚಾಗಿದೆ. ಉಡುಪಿ-ಚಿಕ್ಕಮಗಳೂರ ಕ್ಷೇತ್ರದ ಮತದಾರರು ನನ್ನನ್ನು ಎರಡು ಬಾರಿ ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದಾರೆ. ಸಂಸದೆಯಾಗಿ ನಾನೂ ಕೂಡ ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಮಾಡಿದ್ದೇನೆ. ಮಾಡಿರುವ ಕೆಲಸ ನನಗೆ ತೃಪ್ತಿ ನೀಡಿದೆ ಎಂದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ತಮ್ಮ ಹೆಸರು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಪೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುವೆ, ಗೆಲ್ಲುವೆ ಎಂದು ವಿಶ್ವಾಸ ವ್ಯುಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಆರೋಪಕ್ಕೆ ಉತ್ತರಿಸಿದ ಶೋಭಾ, ನಾನು ಯಾವುದೇ ದ್ರೋಹ ಮಾಡಿಲ್ಲ. ಪಕ್ಷ ಹೆತ್ತ ತಾಯಿ, ತಾಯಿಗೆ ದ್ರೋಹ ಮಾಡಿಲ್ಲ.
ಒಮ್ಮೆ ಪಕ್ಷದ ಟಿಕೆಟ್ ಕೊಟ್ಟರೆ ಮುಗೀತು, ಪಕ್ಷದ ಅಧಿಕೃತ ಅಭರ್ಥಿ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ಅವರು ಪಕ್ಷ ದ್ರೋಹದಂತಹ ಕೆಲಸ ಮಾಡಿರಬಹುದು. ತಮ್ಮ ಸೋಲಿನ ಬಗ್ಗೆ ಮತ್ತೊಬ್ಬರ ಬಗ್ಗೆ ಹೇಳೋದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಸ್ವಪಕ್ಷೀಯ ಟೀಕಾಕಾರರಿಗೆ ತಿರುಗೇಟು ನಿಡಿದರು.
Advertisement

Udayavani is now on Telegram. Click here to join our channel and stay updated with the latest news.

Next